ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಬಿಜೆಪಿ ಶಾಸಕ ಸೌಮೆನ್ ರಾಯ್

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಿಂದ ಟಿಎಂಸಿಗೆ ಮರುಳುತ್ತಿರುವ ನಾಯಕರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಭಾರತೀಯ ಜನತಾ ಪಕ್ಷದ(ಬಿಜೆಪಿ) ಶಾಸಕ ಸೌಮೆನ್ ರಾಯ್...
ಸೌಮೆನ್ ರಾಯ್ ಬಿಜೆಪಿ ಸೇರ್ಪಡೆ
ಸೌಮೆನ್ ರಾಯ್ ಬಿಜೆಪಿ ಸೇರ್ಪಡೆ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಿಂದ ಟಿಎಂಸಿಗೆ ಮರುಳುತ್ತಿರುವ ನಾಯಕರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಭಾರತೀಯ ಜನತಾ ಪಕ್ಷದ(ಬಿಜೆಪಿ) ಶಾಸಕ ಸೌಮೆನ್ ರಾಯ್ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿದರು.

ಈ ಹಿಂದೆ ಟಿಎಂಸಿಯಲ್ಲಿದ್ದ ರಾಯ್ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಅವರು ಉತ್ತರ ದಿನಜ್‌ಪುರ ಜಿಲ್ಲೆಯ ಕಲಿಯಗಂಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಇಂದು ಕೋಲ್ಕತ್ತಾದ ತೃಣಮೂಲ ಭವನದಲ್ಲಿ ರಾಜ್ಯ ಸಚಿವ ಮತ್ತು ಪಕ್ಷದ ನಾಯಕ ಪಾರ್ಥ ಚಟರ್ಜಿ ಸಮ್ಮುಖದಲ್ಲಿ ಮತ್ತೆ ಟಿಎಂಸಿಗೆ ಮರಳಿದರು.

"ಟಿಎಂಸಿಗೆ ಸೇರಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ ರಾಯ್, "ಕೆಲವು ಸನ್ನಿವೇಶಗಳಿಂದಾಗಿ ನಾನು ಬಿಜೆಪಿ ಟಿಕೆಟ್ ನಲ್ಲಿ ಕಲಿಯಗಂಜ್ ನಿಂದ ಸ್ಪರ್ಧಿಸಬೇಕಾಯಿತು. ಆದರೆ ನನ್ನ ಆತ್ಮ ಮತ್ತು ಹೃದಯ ಟಿಎಂಸಿಗೆ ಸೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರಯತ್ನಗಳನ್ನು ಬೆಂಬಲಿಸಲು ನಾನು ಮತ್ತೆ ಪಕ್ಷಕ್ಕೆ ಸೇರಿಕೊಂಡೆ. ನಾನು ಇಲ್ಲದ ಸಮಯದಲ್ಲಿ ಪಕ್ಷಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು.

ಈ ಹಿಂದೆ, ಬಿಜೆಪಿ ಪ್ರಭಾವಿ ನಾಯಕ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭ್ರಾಂಶು ರಾಯ್ ಸೇರಿದಂತೆ ಹಲವು ನಾಯಕರು ಮತ್ತೆ ಟಿಎಂಸಿ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com