ಬಾಲಕಿಯರ ಡ್ರೆಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮಧ್ಯಪ್ರದೇಶದ ಶಾಲಾ ಪ್ರಾಂಶುಪಾಲರ ವಿರುದ್ಧ ಕೇಸ್ ದಾಖಲು

ಸಮವಸ್ತ್ರದಲ್ಲಿರದ ವಿದ್ಯಾರ್ಥಿನಿಯರು ತಮ್ಮ ಉಡುಪನ್ನು ಕಳಚುವಂತೆ ಸೂಚಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್‌ಗಢ: ಸಮವಸ್ತ್ರದಲ್ಲಿರದ ವಿದ್ಯಾರ್ಥಿನಿಯರು ತಮ್ಮ ಉಡುಪನ್ನು ಕಳಚುವಂತೆ ಸೂಚಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮಾಚಲಪುರ ಪೊಲೀಸ್ ಠಾಣೆಗೆ ಮೂವರು ಬಾಲಕಿಯರು ನೀಡಿದ ದೂರಿನ ಪ್ರಕಾರ, ಪ್ರಾಂಶುಪಾಲ ರಾಧೇಶ್ಯಾಮ್ ಮಾಳವೀಯ(50) ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ದೂರಿನ ಪ್ರಕಾರ, ಶಾಲೆ ಈಗಷ್ಟೇ ಆರಂಭವಾಗಿದ್ದರಿಂದ ಹುಡುಗಿಯರು ತಮ್ಮ ಸಮವಸ್ತ್ರ ಇನ್ನೂ ಹೊಲಿಸಿರಲಿಲ್ಲ. ಹೀಗಾಗಿ ಸೋಮವಾರದೊಳಗೆ ಸಮವಸ್ತ್ರ ಹೊಲಿಸುವುದಾಗಿ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರು ಭರವಸೆ ನೀಡಿದರು. ಆದರೆ ಕೋಪಗೊಂಡ ಮಾಳವೀಯ ಅವರು ಪ್ರಸ್ತುತ ಧರಿಸಿರುವ ಡ್ರೆಸ್ ಕಳಚುವಂತೆ ಹೇಳಿದರು ಎಂದು ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಪ್ರಾಂಶುಪಾಲರು ಬಾಲಕಿಯರು ಈ ರೀತಿಯ ಡ್ರೆಸ್ ಗಳನ್ನು ಧರಿಸುವ ಮೂಲಕ ತರಗತಿಯ ಹುಡುಗರನ್ನು "ಹಾಳುಮಾಡುತ್ತಿದ್ದಾರೆ" ಎಂದು ಹೇಳಿದ್ದನ್ನು ಕೇಳಬಹುದು.

"ಶಾಲೆಯ ಮಕ್ಕಳು ಪ್ರತಿಭಟಿಸಿದ ನಂತರ, ನಾವು ಶನಿವಾರ ಸಂಜೆ ಮಾಲ್ವಿಯಾ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಇತರೆ ಐಪಿಸಿ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದೇವೆ" ಎಂದು ಠಾಣೆಯ ಉಪನಿರೀಕ್ಷಕ ಜಿತೇಂದ್ರ ಅಜ್ನಾರೆ ಅವರು ಇಂದು ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com