ಕರ್ನಾಟಕ ಹೈಕೋರ್ಟ್ ಗೆ ಖಾಯಂ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ನಿಂದ 10 ಹೆಸರು ಶಿಫಾರಸು
12 ಹೈಕೋರ್ಟ್ ಗಳಿಗೆ 68 ಖಾಯಂ ನ್ಯಾಯಾಧೀಶರ ನೇಮಕ ಮಾಡುವ ಐತಿಹಾಸಿನ ನಿರ್ಧಾರ ತೆಗೆದುಕೊಳ್ಳಲಿರುವ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಕರ್ನಾಟಕದ ಹೈಕೋರ್ಟ್ ನ ಖಾಯಂ ನ್ಯಾಯಾಧೀಶರ ನೇಮಕಕ್ಕೆ 10 ಹೆಸರುಗಳನ್ನು ಶಿಫಾರಸ್ಸು ಮಾಡಿದೆ.
Published: 08th September 2021 09:26 PM | Last Updated: 08th September 2021 09:26 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: 12 ಹೈಕೋರ್ಟ್ ಗಳಿಗೆ 68 ಖಾಯಂ ನ್ಯಾಯಾಧೀಶರ ನೇಮಕ ಮಾಡುವ ಐತಿಹಾಸಿನ ನಿರ್ಧಾರ ತೆಗೆದುಕೊಳ್ಳಲಿರುವ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಕರ್ನಾಟಕದ ಹೈಕೋರ್ಟ್ ನ ಖಾಯಂ ನ್ಯಾಯಾಧೀಶರ ನೇಮಕಕ್ಕೆ 10 ಹೆಸರುಗಳನ್ನು ಶಿಫಾರಸ್ಸು ಮಾಡಿ ಆದೇಶ ಹೊರಡಿಸಿದೆ.
ಸಿಜೆಐ ಎನ್ ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಈ ಆದೇಶವನ್ನು ಹೊರಡಿಸಿದೆ. ನ್ಯಾಯಾಧೀಶರಾದ ಯುಯು ಲಲಿತ್ ಹಾಗೂ ಎಎಂ ಖಾನ್ವಾಲಿಕರ್ ಅವರೂ ಕೊಲಿಜಿಯಂ ಸದಸ್ಯರಾಗಿದ್ದು ಕೇರಳ ಹೈಕೋರ್ಟ್ ಗೆ ಇಬ್ಬರು ಹೆಚ್ಚುವರಿ ನ್ಯಾಯಾಧೀಶರ-ನ್ಯಾ.ಎಂಆರ್ ಅನಿತಾ, ನ್ಯಾ.ಕೆ.ನಾಯರ್ ಹರಿಪಾಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಕೇಂದ್ರಕ್ಕೆ ಕಳಿಸಲಾಗಿರುವ ಶಿಫಾರಸ್ಸಿನಲ್ಲಿ ಮೂರು ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಒಪ್ಪಿಕೊಂಡ ಬಳಿಕ ಕರ್ನಾಟಕದ ಹೈಕೋರ್ಟ್ ಗೆ 10 ನ್ಯಾಯಾಧೀಶರ ಖಾಯಂ ನೇಮಕಗೊಳ್ಳಲಿದ್ದಾರೆ.
ನ್ಯಾಯಾಧೀಶರ ಪಟ್ಟಿ ಹೀಗಿದೆ...
1. ನ್ಯಾ.ಎಂ.ಗಣೇಶಯ್ಯ ಉಮಾ
2. ನ್ಯಾಯಾಧೀಶ ಶಿವಶಂಕರ್ ಅಮರಣ್ಣವರ್
3. ನ್ಯಾ.ಮರಲೂರ್ ಇಂದ್ರಕುಮಾರ್ ಅರುಣ್
4. ಜಸ್ಟೀಸ್ ಹಂಚಾಟೆ ಸಂಜೀವ್ಕುಮಾರ್
5. ಜಸ್ಟೀಸ್ ವೇದವ್ಯಾಸಾಚಾರ್ ಶ್ರೀಶಾನಂದಾ
6. ನ್ಯಾ.ಪದ್ಮರಾಜ್ ನೇಮಾಚಂದ್ರ ದೇಸಾಯಿ
7. ನ್ಯಾ.ರವಿ ವೆಂಕಪ್ಪ ಹೊಸ್ಮನಿ
8.ನ್ಯಾ. ಸವಣೂರ್ ವಿಶ್ವಜಿತ್ ಶೆಟ್ಟಿ
9. ಜಸ್ಟೀಸ್ ಪಿ.ಕೃಷ್ಣ ಭಟ್
10. ಜಸ್ಟೀಸ್ ಎಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್
ತುರ್ತಾಗಿ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಸ್ಥಾನವನ್ನು ತುಂಬುವುದಕ್ಕಾಗಿ ಸುಪ್ರೀಂ ಕೋರ್ಟ್ ಈ ಹೆಸರುಗಳನ್ನು ಶಿಫಾರಸ್ಸು ಮಾಡಿದೆ.