ಬ್ರಾಹ್ಮಣ ವಿರೋಧಿ ಹೇಳಿಕೆ ಪ್ರಕರಣ: ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ತಂದೆಗೆ ಜಾಮೀನು

ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಂಬಂಧ ಬಂಧನಕ್ಕೊಳಗಾಗಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ, 86 ವರ್ಷದ ನಂದ ಕುಮಾರ್...
ಛತ್ತೀಸ್ ಗಢ ಸಿಎಂ
ಛತ್ತೀಸ್ ಗಢ ಸಿಎಂ

ರಾಯ್‌ ಪುರ್‌: ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಂಬಂಧ ಬಂಧನಕ್ಕೊಳಗಾಗಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ, 86 ವರ್ಷದ ನಂದ ಕುಮಾರ್ ಬಘೇಲ್ ಅವರಿಗೆ ರಾಯಪುರ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಕಳೆದ ಸೆಪ್ಟೆಂಬರ್ 7ರಂದು ಭೂಪೇಶ್ ಬಘೇಲ್‌ ಅವರ ತಂದೆ ನಂದ್ ಕುಮಾರ್ ಬಘೇಲ್ ಅವರನ್ನು ಬಂಧಿಸಿದ ಪೊಲೀಸರು ರಾಯಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನು ಸೆಪ್ಟೆಂಬರ್ 21ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಬಳಿಕ ನಂದ್ ಕುಮಾರ್ ಪರ ವಕೀಲರು ಜಾಮೀನು ಕೋರಿ ರಾಯಪುರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗೆ ಜಾಮೀನು ನೀಡಿದೆ.

ನಂದ ಕುಮಾರ್ ಬಘೇಲ್‌ ಕೆಲವು ದಿನಗಳ ಹಿಂದೆ ರಾಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬ್ರಾಹ್ಮಣರು ವಿದೇಶಿಯರು, ಅವರನ್ನು ಗ್ರಾಮಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದರು. ದೇಶದ ಎಲ್ಲ ಗ್ರಾಮೀಣ ಜನರಿಗೆ ನನ್ನ ಕೋರಿಕೆ ಇಷ್ಟೆ . ಬ್ರಾಹ್ಮಣರು ನಿಮ್ಮ ಗ್ರಾಮಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ನಂದ ಕುಮಾರ್ ಬಘೇಲ್‌ ಮನವಿ ಮಾಡಿದ್ದರು. ಇತರ ಸಮಾಜದ ಜನರೊಂದಿಗೆ ತಾವು ಈ ವಿಷಯವಾಗಿ ಮಾತನಾಡುವುದಾಗಿ. ಎಲ್ಲರೂ ಒಗ್ಗೂಡಿ ಬ್ರಾಹ್ಮಣರನ್ನು ಗ್ರಾಮಗಳಿಂದ ಬಹಿಷ್ಕರಿಸೋಣ ಎಂದು ಕರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com