ಪ್ರತಿಪಕ್ಷಗಳ ಪ್ರತಿಭಟನಾ ರ್‍ಯಾಲಿಯಲ್ಲಿ  ಪಾಲ್ಗೊಳ್ಳಲು ಜೆಡಿಯು ನಿರಾಕರಣೆ

 ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ಹರಿಯಾಣದಲ್ಲಿ ಪ್ರತಿಪಕ್ಷಗಳು ಆಯೋಜಿಸಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಂದಿರುವ ಆಹ್ವಾನವನ್ನು ಮುಖ್ಯಮಂತ್ರಿ  ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆಯೇ ಎಂಬುದು ತಿಳಿದಿಲ್ಲ ಎಂದು ಜೆಡಿಯು ಗುರುವಾರ ಹೇಳಿದೆ. 
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ಹರಿಯಾಣದಲ್ಲಿ ಪ್ರತಿಪಕ್ಷಗಳು ಆಯೋಜಿಸಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಂದಿರುವ ಆಹ್ವಾನವನ್ನು ಮುಖ್ಯಮಂತ್ರಿ  ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆಯೇ ಎಂಬುದು ತಿಳಿದಿಲ್ಲ ಎಂದು ಜೆಡಿಯು ಗುರುವಾರ ಹೇಳಿದೆ. 

ಸೆಪ್ಟೆಂಬರ್ 25 ರಂದು ಜಿಂದ್ ನಲ್ಲಿ ಆಯೋಜಿಸಲಾಗಿರುವ ರ್‍ಯಾಲಿಯಲ್ಲಿ ನಿತೀಶ್ ಕುಮಾರ್ ಪಾಲ್ಗೊಳ್ಳುವಿಕೆಯನ್ನು ಐಎನ್ ಎಲ್ ಡಿ ಮುಖಂಡ ಅಭಯ್ ಚೌಟಲ ದೃಢಪಡಿಸಿದ್ದಾರೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ, ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಆಲಿಯಾಸ್ ಲಾಲನ್, ಇದರ ಬಗ್ಗೆ ಗೊತ್ತಿಲ್ಲ, ಇದು ಪಕ್ಷದ ವಿಚಾರವಲ್ಲಾ, ಮುಖ್ಯಮಂತ್ರಿಯಾಗಿರುವುದರಿಂದ ನಿತೀಶ್ ಕುಮಾರ್ ಆಹ್ವಾನ ಬಂದಿರಬಹುದು. ಇಂತಹ ಸಂದರ್ಭದಲ್ಲಿ ಅವರು ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಪಕ್ಷಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು. 

ಬಿಜೆಪಿ ವಿರುದ್ಧ ದೇವೇಗೌಡ, ಮುಲಾಯಂ ಸಿಂಗ್ ಯಾದವ್, ಪ್ರಕಾಶ್ ಸಿಂಗ್ ಬಾದಲ್ ಅಂತಹ ನಾಯಕರೊಂದಿಗೆ ನಿತೀಶ್ ಕುಮಾರ್ ಪಾಲ್ಗೊಳ್ಳುವುದರಿಂದ ಪಕ್ಷದ ಮೇಲೆ ಆಗುವ ಪರಿಣಾಮದ ಬಗ್ಗೆ ಕೇಳಲಾದ ಪ್ರಶ್ನೆಗೂ ಅವರು ಉತ್ತರಿಸಲು ನಿರಾಕರಿಸಿದರು.

ಮಾಜಿ ಉಪ  ಪ್ರಧಾನಿ ಚೌದರಿ ಲಾಲ್ ಅವರ ಜನ್ಮ ದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಇವರಿಗೆ ಕುಮಾರ್ ಯಾವಾಗಲು ಗೌರವ ನೀಡುತ್ತಿದ್ದರು. ಇತ್ತೀಚಿಗೆ ದೆಹಲಿ ಭೇಟಿ ಸಂದರ್ಭದಲ್ಲಿ ಹರಿಯಾಣ ಮತ್ತು ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಲ ಅವರನ್ನು ನಿತೀಶ್ ಕುಮಾರ್ ಭೇಟಿಯಾಗಿದ್ದರು. ಇದು ಹಲವರ ಕೆಂಗಣ್ಣಿಗೂ ಗುರಿಯಾಗಿತ್ತು. 

2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೃತೀಯ ಬಣ ರಚನೆಯಾಗಿ ಆಯೋಜಿಸಲಾಗಿರುವ ಜಿಂದ್ ರ್‍ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಶರದ್ ಪವಾರ್ ಅಂತಹ ನಾಯಕರು ಪಾಲ್ಗೊಳ್ಳುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com