ಹೊಸ ಕೋವಿಡ್ ರೂಪಾಂತರಿ ಮ್ಯು, ಸಿ.1.2 ವೈರಾಣು ಪ್ರಕರಣ ಭಾರತದಲ್ಲಿ ಇನ್ನೂ ವರದಿಯಾಗಿಲ್ಲ: ಜೀನೋಮಿಕ್ ಒಕ್ಕೂಟ

ಭಾರತದಲ್ಲಿ ಈ ವರೆಗೂ ಕೋವಿಡ್-19 ನ ಹೊಸ ರೂಪಾಂತರಿ ತಳಿ ಮ್ಯು, ಸಿ.1.2 ಸೋಂಕು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಜಿನೋಮಿಕ್ ಒಕ್ಕೂಟ ಹೇಳಿದೆ.
ಕೋವಿಡ್-19 ಗೆ ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತರು
ಕೋವಿಡ್-19 ಗೆ ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತರು

ನವದೆಹಲಿ: ಭಾರತದಲ್ಲಿ ಈ ವರೆಗೂ ಕೋವಿಡ್-19 ನ ಹೊಸ ರೂಪಾಂತರಿ ತಳಿ ಮ್ಯು, ಸಿ.1.2 ಸೋಂಕು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಜಿನೋಮಿಕ್ ಒಕ್ಕೂಟ ಹೇಳಿದೆ.

ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ದೃಢಪಟ್ಟ ಮಾದರಿಗಳ ಸೀಕ್ವೆನ್ಸಿಂಗ್ ಗೆ ಸಂಬಂಧಿಸಿದಂತೆ ಈಗಿರುವ ಶಿಫಾರಸ್ಸುಗಳನ್ನು ಇನ್ನೂ ಕಠಿಣವಾಗಿ ಜಾರಿಗೊಳಿಸುವುದಕ್ಕೆ ಒತ್ತಾಯಿಸಿದೆ.

ಭಾರತದ SARS-CoV-2 ಜಿನೋಮಿಕ್ಸ್ ಒಕ್ಕೂಟದ ವಾರದ ಬುಲೆಟಿನ್  ನಲ್ಲಿ ಡೆಲ್ಟಾ ಹಾಗೂ ಡೆಲ್ಟಾದ ಉಪತಳಿಗಳು ಭಾರತದಲ್ಲಿ ವಿಒಸಿ (ವೇರಿಯೆಂಟ್ಸ್ ಆಫ್ ಕನ್ಸರ್ನ್) ಆಗಿವೆ ಭಾರತ ಹಾಗೂ ಜಾಗತಿಕವಾಗಿ ಎವೈ4 ಹೆಚ್ಚು ಕಾಣಿಸಿಕೊಳ್ಳುತ್ತಿರುವ ಉಪತಳಿಯಾಗಿದೆ. ಐಎನ್ಎಸ್ಎಸಿಒಜಿಯಿಂದ ಸೀಕ್ವೆನ್ಸ್ ನ ಪೈಕಿ 63,774 ವೇರಿಯೆಂಟ್ ಆಫ್ ಕನ್ಸರ್ನ್ ಹಾಗೂ ವೇರಿಯೆಂಟ್ ಆಫ್ ಇಂಟ್ರೆಸ್ಟ್ ಪೈಕಿ 42,833 ಪ್ರಕರಣಗಳು ಡೆಲ್ಟಾ ಆಗಿವೆ.

ಡಬ್ಲ್ಯುಹೆಚ್ಒ ಆ.30 ರಂದು ವೇರಿಯೆಂಟ್ಸ್ ಆಫ್ ಇಂಟ್ರಸ್ಟ್ ಗಳ ಪಟ್ಟಿಗೆ ಬಿ.1.621 (ಬಿ.1.621.1) ನ್ನು ಸೇರಿಸಿ ಮ್ಯು ಎಂಬ ಹೆಸರನ್ನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com