ಕೋವಿಡ್ ಲಸಿಕೆಗಳಿಂದ ಶೇ.96.6ರಿಂದ ಶೇ.97.5 ಸಾವಿನ ಸಾಧ್ಯತೆ ಕಡಿಮೆ: ಐಸಿಎಂಆರ್

ಕೋವಿಡ್ ನಿರ್ವಹಣೆಯಲ್ಲಿ ಕೊರೋನಾ ವೈರಸ್ ಲಸಿಕೆಗಳು ನಿರ್ಣಾಯಕವಾಗಿದ್ದು, ಅವು ಶೇ.96.6ರಿಂದ ಶೇ.97.5ರಷ್ಟು ಸಾವಿನ ಸಂಭಾವ್ಯತೆಯನ್ನು ತಡೆಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ
ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ

ನವದೆಹಲಿ: ಕೋವಿಡ್ ನಿರ್ವಹಣೆಯಲ್ಲಿ ಕೊರೋನಾ ವೈರಸ್ ಲಸಿಕೆಗಳು ನಿರ್ಣಾಯಕವಾಗಿದ್ದು, ಅವು ಶೇ.96.6ರಿಂದ ಶೇ.97.5ರಷ್ಟು ಸಾವಿನ ಸಂಭಾವ್ಯತೆಯನ್ನು ತಡೆಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಾವು ಸಂಭವಿಸುವುದನ್ನು ತಡೆಯುವಲ್ಲಿ ಕೋವಿಡ್ ಲಸಿಕೆಯ ಒಂದು ಡೋಸ್ ಶೇ. 96.6 ಪರಿಣಾಮಕಾರಿಯಾಗಿದ್ದು, ಎರಡು ಡೋಸ್ ಶೇ. 97.5 ಪರಿಣಾಮಕಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್ ಸಾವಿನ ದತ್ತಾಂಶ ಮತ್ತು ಲಸಿಕಾ ದತ್ತಾಂಶಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ  ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೋವಿಡ್ ಕ್ಷಿಪ್ರ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ. ಪೌಲ್ ಅವರು, 'ಎಪ್ರಿಲ್-ಮೇಯಲ್ಲಿ ಅಪ್ಪಳಿಸಿದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ತೆಗೆದುಕೊಳ್ಳದೇ ಇದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಕೋವಿಡ್ ವೈರಸ್ ವಿರುದ್ಧ ಲಸಿಕೆ ಅತಿ ಮುಖ್ಯವಾದ  ತಡೆಯಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ದೇಶಾದ್ಯಂತ ಕೋವಿಡ್ ಲಸಿಕೆ ಲಭ್ಯವಿದೆ. ನಾವು ಲಸಿಕೆ ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಮೊದಲ ಡೋಸ್ ತೆಗೆದುಕೊಂಡ ಬಳಿಕ ಎರಡನೇ ಡೋಸ್ ತೆಗೆದುಕೊಳ್ಳಬಹುದು. ಲಸಿಕೆ ತೆಗೆದುಕೊಳ್ಳುವುದರಿಂದ ಸಾವು ಸಂಭವಿಸದು. ಎರಡೂ ಡೋಸ್ ತೆಗೆದುಕೊಂಡವರಿಗೆ ಕೋವಿಡ್  ಸೋಂಕು ತಗುಲಬಹುದು. ಆದರೆ, ಇದರಿಂದ ಸಾವು ಸಂಭವಿಸದು ಎಂದು ಅವರು ಹೇಳಿದ್ದಾರೆ.  

ಕೇವಲ ಸಾವಷ್ಟೇ ಅಲ್ಲ ಕೋವಿಡ್ ಲಸಿಕೆ ತೆಗೆದುಕೊಂಡವರಿಗೆ ಮತ್ತೆ ಸೋಂಕು ತಗುಲಬಹುದು. ಆದರೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಲಿದೆ. ಕೋವಿಡ್‌ನೊಂದಿಗೆ ಇತರ ಸೋಂಕು ರೋಗಗಳಾದ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಏರಿಕೆಯಾಗುತ್ತಿದೆ.   ಉತ್ತರಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವುದು ಡೆಂಗ್ಯೂ ಎಂದು ಪೌಲ್ ಎಚ್ಚರಿಸಿದರು.

ಇದೇ ವಿಚಾರವಾಗಿ ಮಾತನಾಡಿದ ಬಲರಾಮ್ ಭಾರ್ಗವ ಅವರು, ಈ ವರ್ಷ 18 ಏಪ್ರಿಲ್ ಮತ್ತು 15 ಆಗಸ್ಟ್ ನಡುವೆ ಸಂಗ್ರಹಿಸಿದ ಡೇಟಾವನ್ನು ಸಂಗ್ರಹಿಸಲಾಗಿದ್ದು, ಅಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ, 45 ರಿಂದ 59 ವರ್ಷದೊಳಗಿನ ಅಥವಾ 18 ರಿಂದ 44 ವರ್ಷ ವಯಸ್ಸಿನ ಫಲಾನುಭವಿಗಳನ್ನು ಒಳಗೊಂಡಂತೆ  ಲಸಿಕೆಗಳು "ಸಾವಿನ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು" ಹೊಂದಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com