ನ್ಯೂಸ್ ಲಾಂಡ್ರಿ, ನ್ಯೂಸ್ ಕ್ಲಿಕ್ ಆನ್ ಲೈನ್ ಪತ್ರಿಕಾ ಕಚೇರಿಯಲ್ಲಿ ಐಟಿ ಕಾರ್ಯಾಚರಣೆ

ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಕೇಂದ್ರ ಬಿಜೆಪಿ ಸರ್ಕಾರ ನೀತಿಗಳನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದವು. ಅಲ್ಲದೆ ಸದಾ ಸರ್ಕಾರದ ಪರ ಬ್ಯಾಟಿಂಗ್ ಮಾಡುತ್ತಿದ್ದ ಹಿಂಬಾಲಕರನ್ನು ಲೇವಡಿ ಮಾಡಿದ್ದವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆದಾಯ ತೆರಿಗೆ ಸಿಬ್ಬಂದಿ ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಆನ್ ಲೈನ್ ಸುದ್ದಿತಾಣಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಟಿ ಇಲಾಖೆ ತಾವು ನಡೆಸಿರುವುದು ದಾಳಿಯಲ್ಲ, ಕೇವಲ ತಪಾಸಣೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ. 

ತೆರಿಗೆ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕಚೇರಿಗಳಿಗೆ ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. 

ಕಾರ್ಯಾಚರಣೆ ಸಂದರ್ಭ ಐಟಿ ಅಧಿಕಾರಿಗಳು ಕಚೇರಿ ಸಿಬ್ಬಂದಿಗಳ ಮೊಬೈಲುಫೋನುಗಳನ್ನು ಕಿತ್ತುಕೊಂಡು ಕಚೇರಿಯನ್ನು ಘೇರಾವ್ ಮಾಡಿದ್ದರು ಎಂದು ತಿಳಿದುಬಂದಿದೆ. ಕಾರ್ಯಾಚರಣೆ ಮುಗಿಯುವ ತನಕ ಕಚೇರಿಯ ಯಾವುದೇ ಸಿಬ್ಬಂದಿ ಹೊರಗೆ ಹೋಗಲು ಅನುಮತಿ ನೀಡಲಾಗಿರಲಿಲ್ಲ ಎಂದು ತಿಳಿದುಬಂದಿದೆ.

ನ್ಯೂಸ್ ಲಾಂಡ್ರಿ ಆನ್ ಲೈನ್ ಸುದ್ದಿತಾಣ ಸ್ವತಂತ್ರ ಸುದ್ದಿತಾಣವಾಗಿದ್ದು, ಓದುಗರು ನೀಡುವ ಚಂದಾಹಣದಿಂದಲೇ ನಡೆಯುತ್ತಿರುವ ಮಾಧ್ಯಮ ಸಂಸ್ಥೆಯಾಗಿದೆ. ಈ ತಾಣ ಕೇಂದ್ರ ಸರ್ಕಾರದ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಲೇ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com