ರ್‍ಯಾಷ್ ಡ್ರೈವಿಂಗ್: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬೆಂಗಾವಲು ಪ್ರವೇಶಿಸಿದ ಉದ್ಯಮಿ ವಿರುದ್ಧ ಪ್ರಕರಣ ದಾಖಲು
ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾನ್ವೆನಲ್ಲಿ ಅತ್ಯಾಧುನಿಕ ಕಾರು ನುಗ್ಗಿಸಿದ 49 ವರ್ಷದ ಉದ್ಯಮಿಯ ವಿರುದ್ಧ ರ್‍ಯಾಷ್ ಡ್ರೈವಿಂಗ್ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ...
Published: 14th September 2021 03:21 PM | Last Updated: 14th September 2021 04:58 PM | A+A A-

ಉದ್ಧವ್ ಠಾಕ್ರೆ
ಮುಂಬೈ: ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾನ್ವೆನಲ್ಲಿ ಅತ್ಯಾಧುನಿಕ ಕಾರು ನುಗ್ಗಿಸಿದ 49 ವರ್ಷದ ಉದ್ಯಮಿಯ ವಿರುದ್ಧ ರ್‍ಯಾಷ್ ಡ್ರೈವಿಂಗ್ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದಕ್ಷಿಣ ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಲ್ಲಿ ಸಿಎಂ ಗೃಹ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಹೋಗಿದ್ದರು ಎಂದು ಅವರು ಹೇಳಿದ್ದಾರೆ.
ಭೇಟಿಯ ನಂತರ, ಠಾಕ್ರೆ ಇನ್ನೊಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಉದ್ಯಮಿಯ ಕಾರು ತಪ್ಪಾಗಿ ಸಿಎಂ ಕಾನ್ವೆ ಪ್ರವೇಶಿಸಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಿಎಂ ಹೋಗುತ್ತಿರುವ ಬಗ್ಗೆ ಉದ್ಯಮಿಗೆ ಯಾವುದೇ ಕಲ್ಪನೆ ಇರಲಿಲ್ಲ ಆದರೆ ಅವರು ತಮ್ಮ ಕಾರನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 279 (ರ್ಯಾಶ್ ಡ್ರೈವಿಂಗ್ ಅಥವಾ ಸಾರ್ವಜನಿಕ ದಾರಿಯಲ್ಲಿ ಸವಾರಿ) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಾಗಿದೆ. ನೋಟಿಸ್ ನೀಡಿದ ನಂತರ ಅವರಿಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.