ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರದ ಅಸ್ತು; ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ
ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಸೆ.15 ರಂದು ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.
Published: 15th September 2021 06:28 PM | Last Updated: 15th September 2021 06:28 PM | A+A A-

ಟೆಲಿಕಾಂ ಕಂಪನಿಗಳು
ನವದೆಹಲಿ: ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಸೆ.15 ರಂದು ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.
ಟೆಲಿಕಾಂ ಸಂಸ್ಥೆಗಳ ಶಾಸನಬದ್ಧ ಬಾಕಿಗಳ ಪಾವತಿಯ ಮೇಲೆ 4 ವರ್ಷಗಳ ಮೊರಾಟೋರಿಯಂ, ಟೆಲಿಕಾಂ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸಚಿವ ಸಂಪುಟದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಮಹತ್ವದ ನಿರ್ಧಾರಗಳಾಗಿವೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿರುವ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, ಟೆಲಿಕಾಂಗೆ ಸಂಬಂಧಿಸಿದಂತೆ 9 ರಚನಾತ್ಮಕ ಸುಧಾರಣೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ತಿಳಿಸಿದ್ದಾರೆ.
ಟೆಲಿಕಾಂ ಕ್ಷೇತ್ರದಲ್ಲಿ ಒತ್ತಡಕ್ಕೆ ಕಾರಣವಾಗಿದ್ದ ಎಜಿಆರ್ ವ್ಯಾಖ್ಯಾನವನ್ನು ಸಂಸ್ಥೆಗಳ ಟೆಲಿಕಾಮ್ ಏತರ ಆದಾಯವನ್ನು ಹೊರತುಪಡಿಸಿ ಕ್ರಮಬದ್ಧಗೊಳಿಸಲಾಗಿದೆ