ಮಧ್ಯಪ್ರದೇಶ: ಜೀಬ್ರಾ ಕ್ರಾಸಿಂಗ್‌ನಲ್ಲಿ ಡ್ಯಾನ್ಸ್ ಮಾಡಿದ ಯುವತಿ ವಿರುದ್ಧ ಕೇಸ್ ದಾಖಲು

ಮಧ್ಯ ಪ್ರದೇಶದ ಇಂದೋರ್‌ನ ಜನನಿಬಿಡ ಚೌಕದ ಜೀಬ್ರಾ ಕ್ರಾಸಿಂಗ್‌ನಲ್ಲಿ ಯುವತಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಆ ಯುವತಿ ವಿರುದ್ಧ ದಾಖಲಿಸಿದ್ದಾರೆ.
ಶ್ರೇಯಾ ಕಲ್ರಾ
ಶ್ರೇಯಾ ಕಲ್ರಾ

ಇಂದೋರ್: ಮಧ್ಯ ಪ್ರದೇಶದ ಇಂದೋರ್‌ನ ಜನನಿಬಿಡ ಚೌಕದ ಜೀಬ್ರಾ ಕ್ರಾಸಿಂಗ್‌ನಲ್ಲಿ ಯುವತಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಆ ಯುವತಿ ವಿರುದ್ಧ ದಾಖಲಿಸಿದ್ದಾರೆ.

ಡ್ಯಾನ್ಸ್ ಮಾಡಿದ ಯುವತಿ ಶ್ರೇಯಾ ಕಲ್ರಾ ಅವರ ವಿರುದ್ಧ ಐಪಿಸಿ ಸೆಕ್ಷನ್ 290(ಸಾರ್ವಜನಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

30 ಸೆಕೆಂಡುಗಳ ವೀಡಿಯೋದಲ್ಲಿ ಶ್ರೇಯಾ ಅವರು ನಗರದ ರಸೋಮ ಚೌಕ್ ನಲ್ಲಿ ಕಪ್ಪು ಬಟ್ಟೆ ಧರಿಸಿ, ಮಾಸ್ಕ್ ಮತ್ತು ಅದೇ ಬಣ್ಣದ ಕ್ಯಾಪ್ ಧರಿಸಿ, ರೆಡ್ ಸಿಗ್ನಲ್ ಬಿದ್ದ ನಂತರ ವಾಹನಗಳನ್ನು ನಿಲ್ಲಿಸಿದ ತಕ್ಷಣ 'ಲೆಟ್ ಮಿ ಬಿ ಯುವರ್ ವುಮನ್' ಎಂಬ ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಬುಧವಾರ ಆ ಯುವತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com