ಜಾರ್ಖಂಡ್: 'ಕರ್ಮ ಪೂಜೆ' ವಿಸರ್ಜನೆ ವೇಳೆ ಏಳು ಹುಡುಗಿಯರು ನೀರುಪಾಲು
ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ಹಳ್ಳಿಯೊಂದರಲ್ಲಿ 'ಕರ್ಮ ಪೂಜೆ' ವಿಸರ್ಜನೆ ವೇಳೆ 12 ರಿಂದ 20 ವರ್ಷದೊಳಗಿನ ಏಳು ಹುಡುಗಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Published: 18th September 2021 04:11 PM | Last Updated: 18th September 2021 04:11 PM | A+A A-

ಸಾಂದರ್ಭಿಕ ಚಿತ್ರ
ಲತೇಹರ್: ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ಹಳ್ಳಿಯೊಂದರಲ್ಲಿ 'ಕರ್ಮ ಪೂಜೆ' ವಿಸರ್ಜನೆ ವೇಳೆ 12 ರಿಂದ 20 ವರ್ಷದೊಳಗಿನ ಏಳು ಹುಡುಗಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಲುಮಠ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಜಾರ್ಖಂಡ್‌ನ ಪ್ರಮುಖ ಹಬ್ಬವಾದ ಕರ್ಮ ಪೂಜೆಯ ವೇಳೆ ಬಾಲಕಿಯರು ನೀರು ಪಾಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಬು ಇಮ್ರಾನ್ ಅವರು ಹೇಳಿದ್ದಾರೆ.
ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರಲ್ಲಿ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸುವಂತೆ ಜಿಲ್ಲೆಯ ಉಪ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಇಮ್ರಾನ್ ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಕರ್ಮ ಪೂಜೆಯು ಪ್ರಕೃತಿ ತಾಯಿಯ ಆರಾಧನೆಗೆ ಸಂಬಂಧಿಸಿದ ಒಂದು ಪ್ರಮುಖ ಹಬ್ಬವಾಗಿದೆ.