
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನಿ
ಚಂಡೀಘಡ: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನಿ ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚರಣ್ ಜಿತ್ ಸಿಂಗ್ ಛನಿ, ರಾಜ್ಯಪಾಲರ ಮುಂದೆ ಪಕ್ಷದ ಶಾಸಕರ ಒಕ್ಕೂರಲಿನ ನಿಲುವನ್ನು ವ್ಯಕ್ತಪಡಿಸಿದ್ದೇವೆ. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
"We have presented our stance, unanimously supported by party MLAs, before the Governor. Oath taking ceremony to take place at 11 am tomorrow," says Punjab CM-designate Charanjit Singh Channi pic.twitter.com/Ksh9YnGYpm
— ANI (@ANI) September 19, 2021
ಛನಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ನವಜೀತ್ ಸಿಂಗ್ ಸಿಧು ಮತ್ತಿತರ ಮುಖಂಡರು ಆಯ್ಕೆ ಮಾಡಿರುವ ನಾಯಕರಾಗಿದ್ದಾರೆ. ಇವರು ಮುಖ್ಯಮಂತ್ರಿ ಪದವಿ ಅಲಂಕರಿಸುತ್ತಿರುವ ರಾಜ್ಯದ ಮೊದಲ ದಲಿತ ಮುಖಂಡರಾಗಿದ್ದಾರೆ.
ಇದನ್ನೂ ಓದಿ: ಪಂಜಾಬ್ ನೂತನ ಸಿಎಂ ಚರಣ್ಜಿತ್ ಸಿಂಗ್ ಛನ್ನಿ
ಸಿಧು ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಛನಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರಾಗಿ ಆಯ್ಕೆ ಮಾಡಲಾಗಿತ್ತು.