'ಈವೆಂಟ್‌ ಮುಗಿದಿದೆ': ಮೋದಿ ಜನ್ಮದಿನದ ಲಸಿಕಾ ಅಭಿಯಾನಕ್ಕೆ ರಾಹುಲ್‌ ಗಾಂಧಿ ಲೇವಡಿ

ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ನೆನಪಿಗಾಗಿ ಸೆ 17 ರಂದು ದೇಶಾದ್ಯಂತ ಬೃಹತ್ ಲಸಿಕೀಕರಣ ಅಭಿಯಾನ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತರಾಟೆಗೆ ತೆಗೆದುಕೊಂಡರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ನೆನಪಿಗಾಗಿ ಸೆ 17 ರಂದು ದೇಶಾದ್ಯಂತ ಬೃಹತ್ ಲಸಿಕೀಕರಣ ಅಭಿಯಾನ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತರಾಟೆಗೆ ತೆಗೆದುಕೊಂಡರು.

"ಈವೆಂಟ್ ಮುಗಿದಿದೆ!" ಹೀಗೆಂದು ಟ್ವೀಟ್‌ ಮಾಡುವ ಮೂಲಕ ರಾಹುಲ್‌, ಕೇಂದ್ರ ಸರ್ಕಾರದ ಕ್ರಮವನ್ನು ಲೇವಡಿ ಮಾಡಿದ್ದಾರೆ. ಜೊತೆಗೆ, ಕಳೆದ 10 ದಿನಗಳಲ್ಲಿ ಲಸಿಕೆ ನೀಡಿಕೆಯ ಅಂಕಿ ಅಂಶಗಳನ್ನು ಟ್ಯಾಗ್ ಮಾಡಿದ್ದಾರೆ.

ಕೋವಿನ್ ಅನ್ನು ಉಲ್ಲೇಖಿಸಿರುವ ಗ್ರಾಫ್‌ನಲ್ಲಿ ದೇಶಾದ್ಯಂತ 2.5 ಕೋಟಿ ಡೋಸ್‌ಗಳನ್ನು ನೀಡಿದ ಒಂದು ದಿನದ ನಂತರ ಶನಿವಾರ ಲಸಿಕೀಕರಣದಲ್ಲಿ ತೀವ್ರ ಕುಸಿತ ದಾಖಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 85 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ.

ಬಿಜೆಪಿಯನ್ನು ಉಲ್ಲೇಖಿಸದೆ ಟ್ವೀಟ್‌ ಮಾಡಿರುವ ರಾಹುಲ್, ಮೋದಿ ಅವರ ಜನ್ಮದಿನದಂದು ದೇಶಾದ್ಯಂತ 2.5 ಕೋಟಿ ಡೋಸ್‌ಗಳನ್ನು ನೀಡಿದ ನಂತರ ರಾಜಕೀಯ ಪಕ್ಷಕ್ಕೆ "ಜ್ವರ" ಬಂದಿದೆ. ಅದಕ್ಕೆ ಲಸಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com