ಅನಧಿಕೃತ ಕಟ್ಟಡ ತೆರವು ಮಾಡದಂತೆ ಕೇಂದ್ರ ಸಚಿವರು ಕರೆ ಮಾಡಿ ಮನವಿ ಮಾಡಿಕೊಂಡಿದ್ದರು: ಥಾಣೆ ಮೇಯರ್ ಸ್ಫೋಟಕ ಹೇಳಿಕೆ
ನಗರ ಪಾಲಿಕೆಯ ಕಾರ್ಯಾಚರಣೆ ವೇಳೆ ಅನಧಿಕೃತ ಕಟ್ಟಡದವನ್ನು ರಕ್ಷಿಸುವಂತೆ ಕೇಂದ್ರ ಸಚಿವರಿಂದ ಕರೆ ಬಂದಿತ್ತು ಎಂದು ಥಾಣೆ ಮೇಯರ್ ನರೇಶ್ ಮಸ್ಕೆ ಆರೋಪಿಸಿದ್ದಾರೆ.
Published: 21st September 2021 12:20 PM | Last Updated: 21st September 2021 02:08 PM | A+A A-

ಶಿವಸೇನೆಯ ಥಾಣೆ ಮೇಯರ್ ನರೇಶ್ ಮಸ್ಕೆ
ಥಾಣೆ: ನಗರ ಪಾಲಿಕೆಯ ಕಾರ್ಯಾಚರಣೆ ವೇಳೆ ಅನಧಿಕೃತ ಕಟ್ಟಡದವನ್ನು ರಕ್ಷಿಸುವಂತೆ ಕೇಂದ್ರ ಸಚಿವರಿಂದ ಕರೆ ಬಂದಿತ್ತು ಎಂದು ಥಾಣೆ ಮೇಯರ್ ನರೇಶ್ ಮಸ್ಕೆ ಆರೋಪಿಸಿದ್ದಾರೆ.
ಥಾಣೆ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ನರೇಶ್ ಮಸ್ಕೆ ಮಾಡಿರುವ ಈ ಆರೋಪ ಈಗ ಸಾಕಷ್ಟು ಸುದ್ದಿ ಮತ್ತು ವಿವಾದ ಸೃಷ್ಟಿಸಿದೆ. ಕೇಂದ್ರ ಸಚಿವರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿರುವ ಅವರು ಅನಧಿಕೃತ ಕಟ್ಟಡಗಳು ಮತ್ತು ಅಕ್ರಮ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಅನಧಿಕೃತ ತೆರವು ಕಾರ್ಯಾಚರಣೆಯಿಂದ ಕಟ್ಟಡವನ್ನು ಕಾಪಾಡುವಂತೆ ಕೇಂದ್ರ ಸಚಿವರು ನನಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಎಂದು ಮಸ್ಕೆ ಸಭೆಯಲ್ಲಿ ಹೇಳಿದರು.
ಟಿಎಂಸಿ ಪಕ್ಷದ ಕಲ್ಪಿತಾ ಪಿಂಪಲ್, ಸಹಾಯಕ ಮುನ್ಸಿಪಲ್ ಆಯುಕ್ತರು ಕಳೆದ ತಿಂಗಳು ಅತಿಕ್ರಮಣ ನಿರ್ಮಾಣ ಕಾರ್ಯಾಚರಣೆಯ ಸಮಯದಲ್ಲಿ ವ್ಯಾಪಾರಿಗಳಿಂದ ನಡೆದ ದಾಳಿಯಲ್ಲಿ ಬಚಾವಾಗಿದ್ದರು. ಈ ಘಟನೆಯು ವಿವಿಧ ರಾಜಕೀಯ ಪಕ್ಷಗಳಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಅಕ್ರಮ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಸಾಕಷ್ಟು ಒತ್ತಾಯ ಕೇಳಿಬಂದಿತ್ತು.