The New Indian Express
ರಾಯ್ ಪುರ: ಪ್ಯಾಸೆಂಜರ್ ಬಸ್ ನಲ್ಲಿ ಕುಳಿತಿದ್ದ ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಬಂದೂಕಿನಿಂದ ಸಿಡಿದ ಗುಂಡು ಆತನ ಸಾವಿಗೆ ಕಾರಣವಾದ ಘಟನೆ ಛತ್ತೀಸ್ ಗಡ ರಾಜ್ಯದ ಬಸ್ತರ್ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಸಿಆರ್'ಪಿಎಫ್ ತುಕಡಿ ಮೇಲೆ ಉಗ್ರರ ದಾಳಿ: ಓರ್ವ ಯೋಧನಿಗೆ ಗಾಯ
ಮೃತಪಟ್ಟ ಜವಾನ ಹೆಸರು ತ್ರಿಲೋಕ್ ಸಿಂಗ್ ಎಂದು ತಿಳಿದುಬಂದಿದೆ. ಬಸ್ ನಲ್ಲಿ ಮೃತರ ಜೊತೆ ಸಹೋದ್ಯೋಗಿ ಮಹಿಳಾ ಪೇದೆಯೂ ಇದ್ದರು. ಬಂದೂಕಿನಿಂದ ಸಿಡಿದ ಗುಂಡು ತ್ರಿಲೋಕ್ ಸಿಂಗ್ ಅವರ ತಲೆಯನ್ನು ಭೇಧಿಸಿ, ಬಸ್ಸಿನ ಛಾವಣಿಯನ್ನೂ ಭೇದಿಸಿ ಬಸ್ ನ ಟಾಪ್ ನಲ್ಲಿ ಕುಳಿತಿದ್ದ ಸಹೋದ್ಯೋಗಿ ಮಹಿಳಾ ಪೇದೆಯನ್ನು ಗಾಯಗೊಳಿಸಿದೆ.
ಇದನ್ನೂ ಓದಿ: ಅಸ್ಸಾಂ- ಮಿಜೋರಾಂ ಗಡಿಯಲ್ಲಿ ನಾಲ್ಕು ಸಿಆರ್ ಪಿಎಫ್ ತುಕಡಿಗಳ ನಿಯೋಜನೆ
ಗುಂಡೇಟಿನಿಂದ ಗಾಯಗೊಂಡ ಜವಾನನನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಯ ತನಿಖೆಗಾಗಿ ಆದೇಶಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಶೂಟೌಟ್: ಗ್ಯಾಂಗ್ ಸ್ಟರ್ ಜಿತೇಂದರ್ ಮನ್ 'ಗೋಗಿ' ಸೇರಿ ನಾಲ್ವರ ಸಾವು