ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಗೆ ಇಡಿ ಹೊಸ ಸಮನ್ಸ್
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೆ ಜಾರಿ ನಿರ್ದೇಶನಾಲಯವು ಹೊಸದಾಗಿ ಸಮನ್ಸ್ ನೀಡಿದೆ
Published: 25th September 2021 12:47 PM | Last Updated: 25th September 2021 01:01 PM | A+A A-

ಅನಿಲ್ ಪರಬ್
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೆ ಜಾರಿ ನಿರ್ದೇಶನಾಲಯವು ಹೊಸದಾಗಿ ಸಮನ್ಸ್ ನೀಡಿದೆ.
ಅನಿಲ್ ಪರಬ್ ಮಹಾರಾಷ್ಟ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆಯನ್ನೂ ಹೊಂದಿದ್ದಾರೆ. ಪರಬ್ ಅವರಿಗೆ ಇ.ಡಿಯಿಂದ ನೀಡಲಾಗುತ್ತಿರುವ ಎರಡನೇ ಸಮನ್ಸ್ ಇದಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 28ರಂದು ಇ.ಡಿ ಮುಂದೆ ಹಾಜರಾಗಲು ಪರಬ್ ಅವರಿಗೆ ಸೂಚಿಸಲಾಗಿದೆ.
ಆಗಸ್ಟ್ 31 ರಂದು ವಿಚಾರಣೆಗೆ ಹಾಜರಾಗುವಂತೆ ಪರಬ್ ಅವರಿಗೆ ಈ ಹಿಂದೆ ಸಮನ್ಸ್ ನೀಡಲಾಗಿತ್ತು. ಆದರೆ, ಪರಬ್ ಅವರು 14 ದಿನಗಳ ಕಾಲಾವಕಾಶ ಕೋರಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ರಚನೆಯಲ್ಲಿ ಅನಿಲ್ ಪರಬ್ ಮಹತ್ವದ ಪಾತ್ರ ವಹಿಸಿದ್ದಾರೆ. ಪೊಲೀಸ್ ಅಧಿಕಾರಿ ಸಚಿನ್ ವಾಜೆ ಪ್ರಕರಣದಲ್ಲೂ ಪರಬ್ ಅವರ ವಿರುದ್ಧ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಇಡಿ ಅವರಿಗೆ ನೀಡಿದ ಕನಿಷ್ಠ ಐದು ಸಮನ್ಸ್‌ಗಳನ್ನು ದೇಶಮುಖ್ ತಪ್ಪಿಕೊಂಡಿದ್ದರು, ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ ಅಡಿಯ ಪ್ರಕರಣದಲ್ಲಿ ಈಗ ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್‌ನಲ್ಲಿ ದೇಶಮುಖ್ ರಾಜೀನಾಮೆಗೆ ಕಾರಣವಾದ ಮಹಾರಾಷ್ಟ್ರ ಪೊಲೀಸ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 100 ಕೋಟಿ ಲಂಚ ಮತ್ತು ಸುಲಿಗೆ ದಂಧೆಯ ಕುರಿತು ಇಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಈ ಹಿಂದೆ ಮಹಾ ವಿಕಾಸ್ ಅಗಡಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ದೇಶಮುಖ್ ವಿರುದ್ಧದ ಮುಂಬಯಿ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ಹಾಗೂ ಇತರರು ಮಾಡಿದ ಕನಿಷ್ಠ 100 ಕೋಟಿ ಲಂಚದ ಆರೋಪಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ದಾಖಲಿಸಿದ ನಂತರ ಇಡಿಯು ಸಹ ಈ ಪ್ರಕರಣದಲ್ಲಿ ತನ್ನ ಪಾತ್ರದ ತನಿಖೆಯ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಲಾಗಿದೆ.
ದೇಶ್ಮುಖ್ ಅವರು ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಸಿಂಗ್ ಅವರನ್ನು ತೆಗೆದುಹಾಕಲ್ಪಟ್ಟ ನಂತರ ಅವರ ವಿರುದ್ಧ ಈ ರೀತಿಯ ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ.