ತೃತೀಯ ಲಿಂಗಿಗಳಿಗೆ ಉಚಿತ ಲಸಿಕೆ: ಎನ್ ಜಿ ಒಗಳಿಂದ 'ಪರಿವರ್ತನ್ ಕಾ ಟೀಕಾ' ಲಸಿಕಾ ಅಭಿಯಾನ

ದೇಶಾದ್ಯಂತ ಇರುವ 200 ಅಪೋಲೊ ಆಸ್ಪತ್ರೆಗಳಲ್ಲಿ ಈ ಅಭಿಯಾನ ಜಾರಿಗೊಳ್ಳುತ್ತಿದೆ. ಮುಂದಿನ ಆರು ತಿಂಗಳಲ್ಲಿ ತೃತೀಯ ಲಿಂಗಿಗಳ ಸಮುದಾಯದ ಎಲ್ಲಾ ಸದಸ್ಯರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಭಿಯಾನದ ಗುರಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್ ರಾಷ್ಟ್ರವ್ಯಾಪಿ ಉಚಿತ ಲಸಿಕೆ ಅಭಿಯಾನವನ್ನು ಆಯೋಜಿಸಿದೆ. ದೇಶಾದ್ಯಂತ ಇರುವ 200 ಅಪೋಲೊ ಆಸ್ಪತ್ರೆಗಳಲ್ಲಿ ಈ ಅಭಿಯಾನ ಜಾರಿಗೊಳ್ಳುತ್ತಿದೆ.

ಅಭಿಯಾನದ ಭಾಗವಾಗಿ ಅಪೊಲೊ ಆಸ್ಪತ್ರೆಗಳ 200 ಕೇಂದ್ರಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜನೆಗೊಳ್ಳಲಿದೆ. ತೃತೀಯ ಲಿಂಗಿ ಸಮುದಾಯಗಳು ಮತ್ತು ಅವರಿಗಾಗಿ ಕೆಲಸ ನಿರ್ವಹಿಸುತ್ತಿರುವ ಎನ್ ಜಿಒಗಳು ಈ ಅಭಿಯಾನದಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಲಬಹುದು. 

ತೃತೀಯ ಲಿಂಗಿಗಳು ತಮ್ಮ ಪ್ರದೇಶದ ಹತ್ತಿರದಲ್ಲಿರುವ ಅಪೊಲೊ ಆಸ್ಪತ್ರೆಗೆ ತೆರಳಿ ಉಚಿತ ಲಸಿಕೆ ಪಡೆದುಕೊಳ್ಳಬಹುದು. ಮುಂದಿನ ಆರು ತಿಂಗಳಲ್ಲಿ ತೃತೀಯ ಲಿಂಗಿಗಳ ಸಮುದಾಯದ ಎಲ್ಲಾ ಸದಸ್ಯರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಭಿಯಾನದ ಗುರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com