ಕಿಡ್ನ್ಯಾಪ್ ಆಗಿದ್ದ 5 ದಿನದ ಹಸುಗೂಸು ಮರಳಿ ತಾಯಿ ಮಡಿಲಿಗೆ: ಆಂಧ್ರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಪೋಷಕರಿಗೆ ಮಗು ಹಸ್ತಾಂತರಿಸುತ್ತಿರುವ ಪೊಲೀಸರು
ಪೋಷಕರಿಗೆ ಮಗು ಹಸ್ತಾಂತರಿಸುತ್ತಿರುವ ಪೊಲೀಸರು

ವಿಜಯವಾಡ: ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮಚಿಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಿಂದ ಮಗು ನಾಪತ್ತೆಯಾಗಿತ್ತು. ಕಂಗಾಲಾದ ಪೋಷಕರಾದ ಯೆಸೋಬು ಮತ್ತು ಇಂದುಜಾ ಪೊಲಿಸ್ ದೂರು ನೀಡಿದ್ದರು.

ಆರೋಪಿ ಮಹಿಳೆಯನ್ನು ಮುನಿಪೆದ ಗ್ರಾಮದ ನಿವಾಸಿ ಮೇರಿ ಎಂದು ಗುರುತಿಸಲಾಗಿದ್ದು, ಸಿಸಿ ಟಿವಿ ಆಧಾರದ ಮೇಲೆ ಪೊಲಿಸರು 24 ಗಂಟೆಯೊಳಗಾಗಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. 

ಮೆಡಿಕಲ್ ಚೆಕಪ್ ಗೆಂದು ಆಸ್ಪತ್ರೆಗೆ ಬಂದಿದ್ದ ಮೇರಿ ಮಗುವಿನ ತಾಯಿ ಇಂದುಜಾಳನ್ನು ಪರಿಚಯ ಮಾಡಿಕೊಂಡಿದ್ದಳು. ಆಕೆ ಕೋಣೆಯಲ್ಲಿ ಇಲ್ಲದ ವೇಳೆ ಮೇರಿ ಮಗುವನ್ನು ಅಪಹರಿಸಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com