ಬ್ಲೂಟೂತ್ ಚಪ್ಪಲ್ ಬಳಸಿ ಪರೀಕ್ಷೆಯಲ್ಲಿ ವಂಚನೆ ಯತ್ನ: ವಂಚಕರ ಜಾಲ ಭೇದಿಸಿದ ರಾಜಸ್ಥಾನ ಪೊಲೀಸರು

ಇದೇ ಪರೀಕ್ಷೆ 5 ಬಾರಿ ಮುಂದೂಡಲ್ಪಟ್ಟಿತ್ತು. ಈ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ತಡೆಯುವುದೇ ಪೊಲೀಸರಿಗೆ ಬಹುದೊಡ್ಡ ತಲೆನೋವಾಗಿತ್ತು. ಈ ಹಿಂದೆ ಹಲವು ಬಾರಿ ಈ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.
ಭದ್ರತಾ ದೃಷ್ಟಿಯಿಂದ ಅಭ್ಯರ್ಥಿಯ ಶರ್ಟ್ ಸ್ಲೀವ್ಸ್ ಕಟ್ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ
ಭದ್ರತಾ ದೃಷ್ಟಿಯಿಂದ ಅಭ್ಯರ್ಥಿಯ ಶರ್ಟ್ ಸ್ಲೀವ್ಸ್ ಕಟ್ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ

ಜೈಪುರ: ರಾಜಸ್ಥಾನದಲ್ಲಿ ಹೈಪ್ರೊಫೈಲ್ ಪ್ರವೇಶ ಪರೀಕ್ಷೆ ಎಂದೇ ಹೆಸರಾಗಿರುವ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ (Rajasthan Eligibility Exam for Teachers) ಭಾನುವಾರ ಯಶಸ್ವಿಯಾಗಿ ನೆರವೇರಿದೆ. 

ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದರೂ ಬಹುತೇಕ ಕಡೆ ಶಾಂತಿಯುತವಾಗಿ ನಡೆದಿದೆ. ರಾಜ್ಯದ 3,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಭದ್ರತೆ ಒದಗಿಸಲು 70,000 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಪರೀಕ್ಷೆಯ ಸಂದರ್ಭ ಅಕ್ರಮ ಎಸಗಲು ಯತ್ನಿಸಿದ ಐವರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಕಾಪಿ ಹೊಡೆಯಲು ವಿನೂತನ ಮಾರ್ಗವನ್ನು ಅನುಸರಿಸಿದ್ದರು. ಅವರೆಲ್ಲರೂ ಸೋಲ್ ಒಳಗೆ ಬ್ಲೂಟೂತ್ ಉಪಕರಣವನ್ನು ಅಳವಡಿಸಿದ ಚಪ್ಪಲಿಗಳನ್ನು ಧರಿಸಿ ಬಂದಿದ್ದರು. 

ಈ ಸಂದರ್ಭ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಇದರ ಹಿಂದೆ ಜಾಲವೊಂದು ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿತ್ತು. ಈ ಜಾಲದ ಸದಸ್ಯರು ಬ್ಲೂಟೂತ್ ಚಪ್ಪಲಿಗಳನ್ನು ಅಭಿವೃದ್ಧಿಪಡಿಸಿ ಶಿಕ್ಷಕರ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಬ್ಲೂಟೂತ್ ಚಪ್ಪಲಿಗೆ 6 ಲಕ್ಷ ರೂ. ವಸೂಲಿ ಮಾಡುತ್ತಿದ್ದರು.

ಈ ಹಿಂದೆ ಇದೇ ಪರೀಕ್ಷೆ 5 ಬಾರಿ ಮುಂದೂಡಲ್ಪಟ್ಟಿತ್ತು. ಈ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದನ್ನು ತಡೆಯುವುದೇ ಪೊಲೀಸರಿಗೆ ಬಹುದೊಡ್ಡ ತಲೆನೋವಾಗಿತ್ತು. ಈ ಹಿಂದೆ ಹಲವು ಬಾರಿ ಈ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com