ಕೇರಳ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ, ಎಐಸಿಸಿಗೆ ವಿಎಂ ಸುಧೀರನ್ ರಾಜೀನಾಮೆ

ಇತ್ತೀಚಿಗಷ್ಟೇ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ವಿ ಎಂ ಸುಧೀರನ್ ಅವರು ಸೋಮವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೂ ಗುಡ್ ಬೈ ಹೇಳಿದ್ದಾರೆ.
ವಿಎಂ ಸುಧೀರನ್
ವಿಎಂ ಸುಧೀರನ್

ತಿರುವನಂತಪುರಂ: ಇತ್ತೀಚಿಗಷ್ಟೇ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ವಿ ಎಂ ಸುಧೀರನ್ ಅವರು ಸೋಮವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೂ ಗುಡ್ ಬೈ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕತ್ವವು ಭಾನುವಾರ ಪಿಎಸಿಗೆ ರಾಜೀನಾಮೆ ನೀಡದಂತೆ ಸುಧೀರನ್ ಅವರನ್ನು ತಡೆಯಲು ಪ್ರಯತ್ನಿಸಿತ್ತು. ಆದರೆ 24 ಗಂಟೆಗಳಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸುಧೀರನ್ ಅವರು ಕೇಂದ್ರ ಸಮಿತಿಯಿಂದಲೂ ಹೊರನಡೆಯಲು ನಿರ್ಧರಿಸಿದ್ದಾರೆ. 

ಸುಧೀರನ್ ಅವರನ್ನು ಸಮಾಧಾನಪಡಿಸಲು ಕೇರಳ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಪ್ರಯತ್ನ ನಡೆಸುತ್ತಿದ್ದಾರೆ. ಅನ್ವರ್ ಅವರು ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರನ್ನು ಸಹ ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ.

ಸಾಂಸ್ಥಿಕ ನವೀಕರಣದ ಬಗ್ಗೆ ತಮ್ಮೊಂದಿಗೆ ಮಾತುಕತೆ ನಡೆಸದ ಕಾರಣಕ್ಕಾಗಿ ಸುಧೀರನ್ ಅವರು ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದು, ಕಳೆದ ಶನಿವಾರ 21 ಸದಸ್ಯರ ಕೆಪಿಸಿಸಿಯ ಉನ್ನತ ಅಧಿಕಾರ ಸಮತಿಯಾದ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com