ಭಾರತದ 150 ಪುರಾತನ ಕಲಾಕೃತಿಗಳನ್ನು ನರೇಂದ್ರ ಮೋದಿಯವರಿಗೆ ಮರಳಿಸಿದ ನ್ಯೂಯಾರ್ಕ್: ಭಾರತ ಸರ್ಕಾರ ಕೃತಜ್ಞತೆ

ಮೋದಿ ಮತ್ತು ಬೈಡೆನ್ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಭಾರತದ ಪುರಾತನ ಕಲಾಕೃತಿಗಳ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಜಾರಿಗೆ ಮಾತುಕತೆ ನಡೆಸಿದ್ದಾರೆ. 
ಕಲಾಕೃತಿ ಪರಿಶೀಲಿಸುತ್ತಿರುವ ಮೋದಿ
ಕಲಾಕೃತಿ ಪರಿಶೀಲಿಸುತ್ತಿರುವ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಡಿಸ್ಟ್ರಿಕ್ಟ್ ಅಟಾರ್ನಿ ಭಾರತಕ್ಕೆ ಸೇರಿದ 150ಕ್ಕೂ ಹೆಚ್ಚು ಪುರಾತನ ಕಲಾಕೃತಿಗಳನ್ನು ಹಸ್ತಾಂತರಿಸಿತ್ತು. ಈ ಕ್ರಮಕ್ಕೆ ಭಾರತ ಸರ್ಕಾರ ಮೆಚ್ಚುಗೆ ಸೂಚಿಸಿದೆ. ಸುಮಾರು 157 ಪುರಾತನ ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಮೆರಿಕದಿಂದ ಮರಳುವಾಗ ತಮ್ಮೊಡನೆ ಕರೆತಂದಿದ್ದಾರೆ. 

ಈ ಪುರಾತನ ಕಲಾಕೃತಿಗಳನ್ನು ಅಕ್ರಮವಾಗಿ ಅಮೆರಿಕಕ್ಕೆ ಸಾಗಿಸಲಾಗಿದ್ದವಾಗಿವೆ. ಇದೇ ಸಂದರ್ಭದಲ್ಲಿ ಮೋದಿ ಮತ್ತು ಬೈಡೆನ್ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಭಾರತದ ಪುರಾತನ ಕಲಾಕೃತಿಗಳ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಜಾರಿಗೆ ಮಾತುಕತೆ ನಡೆಸಿದ್ದಾರೆ. 

157 ಕಲಾಕೃತಿಗಳಲ್ಲಿ 71 ಸಾಂಸ್ಕೃತಿಕ ಕಲಾಕೃತಿಗಳಾದರೆ, 60 ಹಿಂದೂ, 16 ಬೌದ್ಧ ಮತ್ತು 9 ಜೈನ ಧರ್ಮಕ್ಕೆ ಸೇರಿದ ಕಲಾಕೃತಿಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com