ರೀಟ್ ಅಕ್ರಮ: 20 ಅಧಿಕಾರಿಗಳನ್ನು ಅಮಾನತುಗೊಳಿಸಿದ ರಾಜಸ್ಥಾನ ಸರ್ಕಾರ

ಇತ್ತೀಚಿನ ರೀಟ್ ಪರೀಕ್ಷೆಯ ಅಕ್ರಮ ತಡೆಯುವಲ್ಲಿ ವಿಫಲವಾದ ಕಾರಣಕ್ಕ ರಾಜಸ್ಥಾನ ಸರ್ಕಾರ ಆರ್‌ಎಎಸ್ ಮತ್ತು ಇಬ್ಬರು ಆರ್‌ಪಿಎಸ್ ಅಧಿಕಾರಿಗಳು ಸೇರಿದಂತೆ 20 ಅಧಿಕಾರಿಗಳನ್ನು ಅಮಾನತು ಮಾಡಿದೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ: ಇತ್ತೀಚಿನ ರೀಟ್ ಪರೀಕ್ಷೆಯ ಅಕ್ರಮ ತಡೆಯುವಲ್ಲಿ ವಿಫಲವಾದ ಕಾರಣಕ್ಕ ರಾಜಸ್ಥಾನ ಸರ್ಕಾರ ಆರ್‌ಎಎಸ್ ಮತ್ತು ಇಬ್ಬರು ಆರ್‌ಪಿಎಸ್ ಅಧಿಕಾರಿಗಳು ಸೇರಿದಂತೆ 20 ಅಧಿಕಾರಿಗಳನ್ನು ಅಮಾನತು ಮಾಡಿದೆ.

ಕಳೆದ ಭಾನುವಾರ ಪರೀಕ್ಷೆ ಆರಂಭವಾಗುವುದಕ್ಕೆ ಒಂದು ಗಂಟೆ ಮುಂಚಿತವಾಗಿ ಪೊಲೀಸ್ ಕಾನ್ಸ್ಟೇಬಲ್ ಪತ್ನಿಗೆ ರೀಟ್ ಪರೀಕ್ಷೆಯ ಪತ್ರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ 31,000 ಶಿಕ್ಷಕರನ್ನು ನೇಮಿಸಿಕೊಳ್ಳಲು ರೀಟ್ ಪರೀಕ್ಷೆ ನಡೆದಿತ್ತು. 

ಅಮಾನತುಗೊಂಡ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಿಸಿದ್ದಾರೆ. 

ಕಳೆದ ಒಂದು ವರ್ಷದಲ್ಲಿ, ರಾಜ್ಯದ 5 ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ರಾಕೆಟ್‌ಗಳು ಪತ್ತೆಯಾಗಿವೆ. ಇತರ ಹಲವು ಅಧಿಕಾರಿಗಳ ಪಾತ್ರವನ್ನು ಸಂಶಯಾಸ್ಪದವೆಂದು ಪರಿಗಣಿಸುವುದರೊಂದಿಗೆ, ಅಮಾನತುಗೊಂಡ ಅಧಿಕಾರಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎನ್ನಲಾಗಿದೆ.

ರಾಜಸ್ಥಾನದ ಇತಿಹಾಸದಲ್ಲಿ ಹಿರಿಯ ಆಡಳಿತ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಮಾನತುಗೊಳಿಸಿದ್ದು ಇದೇ ಮೊದಲು. 

ರೀಟ್ ಪರೀಕ್ಷೆಯಲ್ಲಿ ಅರ್ಜಿದಾರರಿಗೆ 6 ಲಕ್ಷ ರೂಪಾಯಿ ಮೌಲ್ಯದ ಬ್ಲೂಟೂತ್ ಸಾಧನ-ಸುಸಜ್ಜಿತ 'ಚಪ್ಪಲ್'ಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಸೋಮವಾರ ಐದು ಜನರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com