ದೆಹಲಿ ಆಪ್ ಸರ್ಕಾರದಿಂದ ಶಾಲಾಮಕ್ಕಳಿಗೆ 'ದೇಶಭಕ್ತಿ ಧ್ಯಾನ್' ಪಠ್ಯ ಪುಸ್ತಕ ಬಿಡುಗಡೆ: ಮಕ್ಕಳಲ್ಲಿ ದೇಶಭಕ್ತಿ ಬೆಳೆಸಲು ಕ್ರಮ

ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಧ್ಯಾನ್' ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ. ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.
ಪಠ್ಯಪುಸ್ತಕ ಬಿಡುಗಡೆಗೊಳಿಸುತ್ತಿರುವ ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯ
ಪಠ್ಯಪುಸ್ತಕ ಬಿಡುಗಡೆಗೊಳಿಸುತ್ತಿರುವ ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯ

ನವದೆಹಲಿ: ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಧ್ಯಾನ್' ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ. ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.

ಪ್ರತಿದಿನ ತರಗತಿ ಶುರುವಾಗುವ ಮುನ್ನ ಬೆಳಿಗ್ಗೆ 5 ನಿಮಿಷಗಳ ಕಾಲ ದೇಶಭಕ್ತಿ ಬೆಳೆಸುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ನಡೆಸಲಾಗುವುದು. ಅದರಲ್ಲಿ ಭಾರತ ಏಕೆ ಮಹಾನ್ ದೇಶ ಮತ್ತು ಏಕೆ ಇನ್ನೂ ನಮ್ಮ ದೇಶ ಅಭಿವೃದ್ಧಿ ಹೊಂದಿಲ್ಲ ಎನ್ನುವ ವಿಚಾರವನ್ನು ಮಕ್ಕಳಿಗೆ ಪ್ರಸ್ತುತ ಪಡಿಸಲಾಗುವುದು.

6ರಿಂದ ದ್ವಿತೀಯ ಪಿಯುಸಿ ತನಕ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು. ಪ್ರತಿದಿನ 5 ನಿಮಿಷಗಳ ದೇಶಭಕ್ತಿ ಕುರಿತ ವಿಚಾರ ಪ್ರಸ್ತುತಿ ಹೊರತಾಗಿ 40 ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು.

6- 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಈ ಬೋಧನೆ ನಡೆಯಲಿದ್ದರೆ, 9- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನ ದೇಶಪ್ರೇಮ ಕುರಿತ ತರಗತಿ ನಡೆಸಲಾಗುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com