ಮುಂಬೈ: ವಾಕಿಂಗ್ ಸ್ಟಿಕ್‌ ನೊಂದಿಗೆ ಚಿರತೆಯೊಂದಿಗೆ ಹೋರಾಡಿ ಗೆದ್ದ ಹಿರಿಯ ಮಹಿಳೆ

ಮುಂಬೈನಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು ಈ ವೇಳೆ ತಮ್ಮ ವಾಕಿಂಗ್ ಸ್ಟಿಕ್ ನೊಂದಿಗೆ ಹೋರಾಡಿ ಮಹಿಳೆ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಮಹಿಳೆ ಮೇಲೆ ಚಿರತೆ ದಾಳಿ
ಮಹಿಳೆ ಮೇಲೆ ಚಿರತೆ ದಾಳಿ

ಮುಂಬೈ: ಮುಂಬೈನಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದ್ದು ಈ ವೇಳೆ ತಮ್ಮ ವಾಕಿಂಗ್ ಸ್ಟಿಕ್ ನೊಂದಿಗೆ ಹೋರಾಡಿ ಮಹಿಳೆ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ಈ ಘಟನೆ ಬುಧವಾರ ಸಂಜೆ ಮುಂಬೈನ ಆರೆ ಡೈರಿ ಪ್ರದೇಶದಲ್ಲಿ ನಡೆದಿದ್ದು, ಕಟ್ಟಡಕ್ಕೆ ಹಾಕಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಸಂಪೂರ್ಣ ವಿಡಿಯೋ ದಾಖಲಾಗಿದೆ. ಮಹಿಳೆಯೊಬ್ಬರು ವಾಕಿಂಗ್ ಸ್ಟಿಕ್ ಸಹಾಯದಿಂದ  ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾರೆ. ಅಲ್ಲಿಯೇ ದಾಳಿಗೆ ಹೊಂಚು ಹಾಕುತ್ತಿದ್ದ ಚಿರತೆ ಆಕೆ ಮೇಲೆ ದಾಳಿ ಮಾಡುತ್ತದೆ.

ಈ ವೇಳೆ ಮಹಿಳೆ ತಮ್ಮ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ ನಿಂದ ಚಿರತೆ ಮೇಲೆ ದಾಳಿ ಮಾಡಿ, ಸಹಾಯಕ್ಕಾಗಿ ಕೂಗಿಕೊಳ್ಳುತ್ತಾರೆ. ಮಹಿಳೆ ದಾಳಿ ಮಾಡುತ್ತಿದ್ದಂತೆಯೇ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಮಹಿಳೆಯ ಕೂಗು ಕೇಳಿದ ಮನೆಯವರು ಅಲ್ಲಿಗೆ ಓಡಿ ಬರುತ್ತಾರೆ. ಮಹಿಳೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. 

ಇದು ಮುಂಬೈನಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಚಿರತೆ ದಾಳಿಯಾಗಿದೆ. ಇನ್ನು ಈ ದಾಳಿಯಲ್ಲಿ ಗಾಯಗೊಂಡ ಮಹಿಳೆಯನ್ನು ನಿರ್ಮಲಾ ದೇವಿ ಸಿಂಗ್ (55) ಎಂದು ಗುರುತಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com