ಗಾಂಧಿ ಕುಟುಂಬವನ್ನು ಪಕ್ಷದಿಂದ ಹೊರಗಿಡಬೇಕೆಂದು ಜಿ-23 ಬಯಸಲಿಲ್ಲ: ಕಮಲ್ ನಾಥ್
ಹೊರಗಿನಿಂದ ಬಂದವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಹಾಗೂ ಗಾಂಧಿ ಕುಟುಂಬ ಪಕ್ಷದಿಂದ ಹೊರಗಿರಬೇಕು ಎಂದು ಜಿ,23 ತಂಡ ಎಂದೂ ಬಯಸಿರಲಿಲ್ಲ ಎಂಬುದಾಗಿ ಕಮಲ್ ನಾಥ್ ಹೇಳಿದ್ದಾರೆ.
Published: 01st April 2022 11:21 AM | Last Updated: 01st April 2022 02:39 PM | A+A A-

ಕಮಲ್ ನಾಥ್
ಭೂಪಾಲ್: ಹೊರಗಿನಿಂದ ಬಂದವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಹಾಗೂ ಗಾಂಧಿ ಕುಟುಂಬ ಪಕ್ಷದಿಂದ ಹೊರಗಿರಬೇಕು ಎಂದು ಜಿ,23 ತಂಡ ಎಂದೂ ಬಯಸಿರಲಿಲ್ಲ ಎಂಬುದಾಗಿ ಕಮಲ್ ನಾಥ್ ಹೇಳಿದ್ದಾರೆ.
ಅತೃಪ್ತರ ಗುಂಪು ಪಕ್ಷ ಮತ್ತು ಸಾಂಸ್ಥಿಕ ಚುನಾವಣೆಗಳಲ್ಲಿ ಸುಧಾರಣೆಗಳನ್ನು ಒತ್ತಾಯಿಸುತ್ತಿದೆ ಮತ್ತು ಮೂರು ತಿಂಗಳೊಳಗೆ ಚುನಾವಣೆಗಳು ನಡೆಯಬೇಕು ಎಂದು ಬಯಸುತ್ತಿರುವುದಾಗಿ ಕಮಲ್ ನಾಥ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನೂ ಓದಿ: ಪಂಚರಾಜ್ಯಗಳ ಹೀನಾಯ ಸೋಲು: ಕಾಂಗ್ರೆಸ್ ಹೈಕಮಾಂಡ್ ಗೆ ತಟ್ಟಿದ ಬಿಸಿ, ನಾಯಕತ್ವ ಬದಲಾವಣೆಗೆ ಜಿ23 ನಾಯಕರು ಒತ್ತು
ಗಾಂಧಿಯೇತರ ಕುಟುಂಬದ ಸದಸ್ಯರು ಕಾಂಗ್ರೆಸ್‌ನ ಮುಖ್ಯಸ್ಥರಾಗಬೇಕು ಎಂಬ ಬೇಡಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್ ನಾಥ್,ಪಕ್ಷದಲ್ಲಿ ಚುನಾವಣೆಗಳು ನಡೆಯಲಿವೆ. ಈ ಜಿ-23 ಗುಂಪು ನನಗೆ ತುಂಬಾ ಹತ್ತಿರವಾಗಿದೆ. ಅವರು ಹಲವು ವರ್ಷಗಳಿಂದ ನನ್ನ ಸಹೋದ್ಯೋಗಿಗಳು. ಅವರು ಎಂದಿಗೂ ಅಂತಹ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ, ವಾಸ್ತವವಾಗಿ, ಅವರ ಎಲ್ಲಾ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ, ಅವರು ಪಕ್ಷದ ಚುನಾವಣೆಗಳನ್ನು ನಡೆಸುವಂತೆ ಕೇಳಿದ್ದಾರೆ. ಸದಸ್ಯತ್ವವಿಲ್ಲದೆ ಚುನಾವಣೆ ನಡೆಸಲಾಗುವುದಿಲ್ಲ ಎಂದಿದ್ದಾರೆ.