ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆ, ಅಧಿಕಾರ ವಹಿಸಿಕೊಳ್ಳಲು 249 ಕಿ.ಮೀ ಸೈಕಲ್ ತುಳಿದ ಮಹಾರಾಷ್ಟ್ರ ಅರಣ್ಯಾಧಿಕಾರಿ!
ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
Published: 01st April 2022 08:46 PM | Last Updated: 01st April 2022 08:46 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ 59 ವರ್ಷ ತುಂಬಿದ ನಾನಾ ಸಾಹೇಬ್ ಲಾಡ್ಕತ್ ಬುಧವಾರ ಸೈಕ್ಲಿಂಗ್ ಆರಂಭಿಸಿದ್ದು, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ.
ಸ್ಲೈಕ್ಲಿಂಗ್ ನನ್ನ ಹವ್ಯಾಸವಾಗಿದೆ. ಆರಂಭದಲ್ಲಿ ದಿನವೊಂದರಲ್ಲಿ 60 ಕಿಲೋ ಮೀಟರ್ ದಾಟಿರಲಿಲ್ಲ. ಆದರೆ, ಕೊಲ್ಲಾಪುರಕ್ಕೆ ವರ್ಗಾವಣೆಯಾದಾಗ, ಅಲ್ಲಿಗೆ ಒಂದು ದಿನದಲ್ಲಿಯೇ ಸೈಕಲ್ ನಲ್ಲಿಯೇ ಹೋಗಬೇಕೆಂದು ನಿರ್ಧರಿಸಿದ್ದಾಗಿ ಅವರು ಹೇಳುತ್ತಾರೆ. ಬಿಸಿಲಿನ ತೀವ್ರತೆ ಹೆಚ್ಚಳದಿಂದ ಸ್ವಲ್ಪ ವಿರಾಮದ ಅಗತ್ಯವಿತ್ತು. ಪುಣೆ ಮತ್ತು ಸಾತರ ಜಿಲ್ಲೆ ನಡುವಿನ ಕಾಂಬಟ್ಕಿ ಘಟ್ಟ ಪ್ರದೇಶದಲ್ಲಿ ತೆರಳುವುದು ಸವಾಲಿನಿಂದ ಕೂಡಿತ್ತು. ಆದರೆ, ಹೇಗೋ ಅದನ್ನು ನಿರ್ವಹಿಸಿದ್ದಾಗಿ ಅವರು ತಿಳಿಸಿದರು.
ಲಾಡ್ಕತ್ ಬುಧವಾರ ಸಂಜೆ ಕೊಲ್ಲಾಪುರ ತಲುಪಿದ್ದು, ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಹುದ್ದೆ ಸ್ವೀಕರಿಸಿದ್ದಾರೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸಂದೇಶ ನೀಡುವುದು ಸ್ಲೈಕ್ಲಿಂಗ್ ಹಿಂದಿನ ಉದ್ದೇಶ ಎಂದು ಲಾಡ್ಕತ್ ಹೇಳಿದರು.