ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಭಗವಂತ್ ಮಾನ್, ಕೇಜ್ರಿವಾಲ್: ಗುಜರಾತ್ ಚುನಾವಣೆ ಮೇಲೆ AAP ದೃಷ್ಟಿ
ಎರಡು ದಿನಗಳ ಅಹಮದಾಬಾದ್ ಪ್ರವಾಸ ಕೈಗೊಂಡಿರುವ ಇಬ್ಬರು ನಾಯಕರು, ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.
Published: 02nd April 2022 01:10 PM | Last Updated: 02nd April 2022 01:21 PM | A+A A-

ಚರಕದಿಂದ ನೂಲು ತೆಗೆಯುತ್ತಿರುವ ಕೇಜ್ರಿವಾಲ್, ಭಗವಂತ್ ಮಾನ್
ಅಹಮದಾಬಾದ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: 1990ರ ನಂತರ ರಾಜ್ಯಸಭೆಯಲ್ಲಿ 100ರ ಗಡಿ ದಾಟಿದ ಮೊದಲ ಪಕ್ಷ ಬಿಜೆಪಿ: ಮತ್ತೆ ಕುಸಿತ ಸಾಧ್ಯತೆ!
ಮುಂಬರುವ ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ಇಬ್ಬರು ನಾಯಕರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಹಾತ್ಮ ಗಾಂಧಿಯವರ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದರು.
ಇದನ್ನೂ ಓದಿ: ಅಯೋಧ್ಯೆ ದೇವಾಲಯಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ತೆರಿಗೆ ವಿನಾಯಿತಿ: ಸಿ.ಎಂ ಯೋಗಿ ಆದಿತ್ಯನಾಥ್ ಆದೇಶ
ಎರಡು ದಿನಗಳ ಅಹಮದಾಬಾದ್ ಪ್ರವಾಸ ಕೈಗೊಂಡಿರುವ ಇಬ್ಬರು ನಾಯಕರು, ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಕಳೆದ ವರ್ಷ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷವು ರಾಜ್ಯ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: 20 ಕೆಜಿ ಆರ್‌ಡಿಎಕ್ಸ್, 20 ಮಂದಿ ಸ್ಲೀಪರ್ ಸೆಲ್; ಪ್ರಧಾನಿ ಮೋದಿ ಹತ್ಯೆಗೆ ಸಂಚು; ಎನ್‌ಐಎಗೆ ಇ-ಮೇಲ್ ಬೆದರಿಕೆ!
ಆಮ್ ಆದ್ಮಿ ಪಕ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಬಿಜೆಪಿಯನ್ನು ಸೋಲಿಸಿತ್ತು. ಅದೇ ಫಲಿತಾಂಶವನ್ನು ಆಪ್ ಪಕ್ಷವು ಗುಜರಾತಿನಲ್ಲಿ ಎದುರು ನೋಡುತ್ತಿದೆ.
ಇದನ್ನೂ ಓದಿ: ಕೇಜ್ರಿವಾಲ್ ಮನೆ ಧ್ವಂಸ ಪ್ರಕರಣ: ಎಫ್ಐಆರ್ ದಾಖಲಿಸಿದ ಪೊಲೀಸರು