ಭಾರತ-ನೇಪಾಳ ಗಡಿ ವಿವಾದ ಇತ್ಯರ್ಥಕ್ಕೆ ಮೋದಿಗೆ ನೇಪಾಳದ ಪ್ರಧಾನಿ ಆಗ್ರಹ
ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಏ.02 ರಂದು ಗಡಿಯಾಚೆ ತಲುಪುವ ರೈಲು ಜಾಲ, ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದ್ದಾರೆ.
Published: 02nd April 2022 05:10 PM | Last Updated: 02nd April 2022 05:10 PM | A+A A-

ಪ್ರಧಾನಿ ಮೋದಿ-ನೇಪಾಳ ಪ್ರಧಾನಿ ಮಾತುಕತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಏ.02 ರಂದು ಗಡಿಯಾಚೆ ತಲುಪುವ ರೈಲು ಜಾಲ, ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದ್ದಾರೆ.
ಇದೇ ವೇಳೆ ಭಾರತ-ನೇಪಾಳ ಗಡಿ ವಿವಾದ ಇತ್ಯರ್ಥಕ್ಕೆ ನೇಪಾಳ ಪ್ರಧಾನಿ ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ನೇಪಾಳ-ಭಾರತದ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸಲು ಪ್ರಸ್ಪರ ಒಪ್ಪಿಗೆ ಸೂಚಿಸಿದ್ದು 4 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ರಾಷ್ಟ್ರಗಳ ನಡುವಿನ ಗಡಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಮ್ಮ ಹೇಳಿಕೆಯಲ್ಲಿ ದೇವುಬಾ ತಿಳಿಸಿದ್ದು, ದ್ವಿಪಕ್ಷೀಯ ಮಾತುಕತೆ ಮೂಲಕ ಶೀಘ್ರವೇ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳುವುದಕ್ಕೆ ಪ್ರಧಾನಿ ಮೋದಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ನೇಪಾಳ-ಭಾರತದ ದ್ವಿಪಕ್ಷೀಯ ಸಂಬಂಧ ಅತ್ಯಂತ ವಿಶಿಷ್ಟವಾಗಿದ್ದು ಈ ರೀತಿಯ ಸಂಬಂಧ ಜಗತ್ತಿನ ಬೇರೆ ಯಾವುದೇ ಭಾಗದಲ್ಲೂ ಕಾಣಲು ಸಿಗುವುದಿಲ್ಲ ಎಂದು ಮೋದಿ ಬಣ್ಣಿಸಿದ್ದಾರೆ.