ಅವಹೇಳನಕಾರಿ ಹೇಳಿಕೆ: ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಗೆ ಹೈಕೋರ್ಟ್ ಜಾಮೀನು ಮಂಜೂರು
ಮಹಾತ್ಮ ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಮೂರು ತಿಂಗಲ ಕಾಲ ಜೈಲಿನಲ್ಲಿ ಕಳೆದ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಗೆ ಛತ್ತೀಸ್ ಗಢ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Published: 02nd April 2022 12:37 AM | Last Updated: 02nd April 2022 12:37 AM | A+A A-

ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ
ರಾಯ್ ಪುರ: ಮಹಾತ್ಮ ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಮೂರು ತಿಂಗಲ ಕಾಲ ಜೈಲಿನಲ್ಲಿ ಕಳೆದ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಗೆ ಛತ್ತೀಸ್ ಗಢ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಾಂದೆಲ್ ಅವರ ಏಕ ಸದಸ್ಯ ಪೀಠ, 47 ವರ್ಷದ ಸ್ವಾಮೀಜಿ ಕಾಳಿ ಚರಣ್ ಮಹಾರಾಜ್ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರ ಪರ ವಕೀಲ ಕಿಶೋರ್ ಬದೌರಿ ತಿಳಿಸಿದ್ದಾರೆ.
ಇಬ್ಬರು ಶ್ಯೂರಿಟಿಗಳು ತಲಾ ರೂ. 50,000 ದಂತೆ 1 ಲಕ್ಷ ಮೌಲ್ಯದ ಬಾಂಡ್ ಒದಗಿಸಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಕಕ್ಷಿದಾರ ಅಮಾಯಕರಾಗಿದ್ದು, ರಾಜಕೀಯ ದ್ವೇಷದಿಂದ ತಪ್ಪಾಗಿ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬದೌರಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು. ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು.