
ಭಿತ್ತಿಪತ್ರ
ನವದೆಹಲಿ: ಅಪರಿಚಿತ ವ್ಯಕ್ತಿಗಳು ನವದೆಹಲಿಯ ಅಮೆರಿಕ ದೂತವಾಸ ಕಚೇರಿ ಹೊರಗೆ ಅಮೆರಿಕ ವಿರೋಧಿ ಭಿತ್ತಿಪತ್ರವನ್ನು ಅಂಟಿಸಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಯುದ್ಧ ಕುರಿತು ಸಲಹೆಗಾರರಿಂದ ಪುಟಿನ್ ಗೆ ತಪ್ಪು ಮಾಹಿತಿ: ಅಮೆರಿಕ ಇಂಟೆಲ್
ನಂಬಿಕೆಗೆ ಅನರ್ಹವಾದ ಬೈಡನ್ ಸರ್ಕಾರ. ಭಾರತದತ್ತ ಕೆಂಗಣ್ಣು ಬೀರುವುದನ್ನು ನಿಲ್ಲಿಸಿ. ಭಾರತಕ್ಕೆ ಅಮೆರಿಕದ ಅಗತ್ಯವಿಲ್ಲ. ಚೀನಾ ವಿರುದ್ಧ ಹೋರಾಟ ನಡೆಸಲು ಅಮೆರಿಕಕ್ಕೆ ಭಾರತ ಅಗತ್ಯವಿದೆ, ಎಂದು ಭಿತ್ತಿಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ವಿದೇಶಿ ಪಿತೂರಿ: ಇಮ್ರಾನ್ ಖಾನ್ ಆರೋಪ ತಳ್ಳಿಹಾಕಿದ ಯುಎಸ್
ಭಿತ್ತಿ ಪತ್ರದ ಮೇಲೆ ಹಿಂದೂ ಸೇನಾ ಸಂಘಟನೆಯ ಚಿಹ್ನೆ ಕಂಡುಬಂದಿದೆ. ಅಲ್ಲದೆ ಹಿಂದೂ ಸೇನಾ ಸಂಘಟನೆಯ ಟ್ವಿಟ್ಟರ್ ಖಾತೆಯಲ್ಲಿ ಭಿತ್ತಿಪತ್ರವನ್ನು ಪೋಸ್ಟ್ ಮಾಡಲಾಗಿದೆ ಎನ್ನುವುದು ಗಮನಾರ್ಹ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಬೈಡನ್ ಪಕ್ಷವಾದ ಡೆಮೋಕ್ರೆಟ್ ಗೆ ಬೆಂಬಲ ಕೊಡಬೇಡಿ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಅಮೆರಿಕ: ಜಾರ್ಜ್ ಫ್ಲಾಯ್ಡ್ ಪ್ರತಿಭಟನಾಕಾರರಿಗೆ 106 ಕೋಟಿ ರೂ. ಪರಿಹಾರ ಘೋಷಣೆ; ಪೊಲೀಸರಿಗೆ ಸೋಲು