ನವದೆಹಲಿ: ಗೂಳಿ ತಿವಿದು ಮಾರುದ್ದ ದೂರದಲ್ಲಿ ಬಿದ್ದ ಪೊಲೀಸ್- ವಿಡಿಯೋ
ಬಿಡಾಡಿ ಗೂಳಿ ತಿವಿದ ಪರಿಣಾಮ ಕರ್ತವ್ಯ ನಿರತ ಪೊಲೀಸರೊಬ್ಬರು ಗಾಳಿಯಲ್ಲಿ ಹಾರುತ್ತಾ, ಮಾರುದ್ದ ದೂರದಲ್ಲಿ ಬಿದ್ದಿದ್ದಾರೆ. ದೆಹಲಿಯ ದಯಾಲ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Published: 03rd April 2022 12:43 PM | Last Updated: 03rd April 2022 12:49 PM | A+A A-

ಗೂಳಿ ದಾಳಿಯ ಚಿತ್ರ
ನವದೆಹಲಿ: ಬಿಡಾಡಿ ಗೂಳಿ ತಿವಿದ ಪರಿಣಾಮ ಕರ್ತವ್ಯ ನಿರತ ಪೊಲೀಸರೊಬ್ಬರು ಗಾಳಿಯಲ್ಲಿ ಹಾರುತ್ತಾ, ಮಾರುದ್ದ ದೂರದಲ್ಲಿ ಬಿದ್ದಿದ್ದಾರೆ. ದೆಹಲಿಯ ದಯಾಲ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಪೇದೆ ಜ್ಞಾನ ಸಿಂಗ್ ಗೂಳಿ ತಿವಿತದಿಂದ ಗಾಯಗೊಂಡವರು. ಹಿಂದಿನಿಂದ ಬಂದ ಗೂಳಿ, ಪೊಲೀಸ್ ಪೇದೆಯನ್ನು ತಿವಿದಿದ್ದೆ. ಇದರಿಂದಾಗಿ ಆತ ಗಾಳಿಯಲ್ಲಿ ತೇಲಿ ಮಾರುದ್ದ ದೂರದಲ್ಲಿ ಬಿದ್ದಿದ್ದಾರೆ.
ಪೊಲೀಸ್ ಪೇದೆ ನೆಲದ ಮೇಲೆ ಬಿದ್ದ ನಂತರ, ಸುತ್ತಮುತ್ತ ಕರ್ತವ್ಯದಲ್ಲಿದ್ದ ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.