ಪಂಜಾಬ್ ನಂತರ ಜಮ್ಮುನತ್ತ ಎಎಪಿ ಕಣ್ಣು! ಕಣಿವೆ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಕೇಜ್ರಿವಾಲ್ ಗಮನ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಇದೀಗ ಜಮ್ಮು ಮತ್ತು ಕಾಶ್ಮೀರದತ್ತ ಕಣ್ಣಿಟ್ಟಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ವಲಯದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.
Published: 04th April 2022 08:33 AM | Last Updated: 04th April 2022 01:34 PM | A+A A-

ಅರವಿಂದ್ ಕೇಜ್ರಿವಾಲ್
ಶ್ರೀನಗರ: ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಇದೀಗ ಜಮ್ಮು ಮತ್ತು ಕಾಶ್ಮೀರದತ್ತ ಕಣ್ಣಿಟ್ಟಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ವಲಯದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.
ಸುಮಾರು 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಜಮ್ಮು ವಲಯದತ್ತ ಎಎಪಿ ಗಮನ ಹರಿಸುತ್ತಿದೆ. ಕ್ಷೇತ್ರ ಪುನರ್ ರಚನೆ ನಂತರ 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ 43 ವಿಧಾನಸಭಾ ಸ್ಥಾನಗಳು ಇರಲಿವೆ.
ಇದನ್ನೂ ಓದಿ: ಬಿಜೆಪಿಯಲ್ಲಿ ದುರಹಂಕಾರ ತುಂಬಿದೆ: ಎಎಪಿಗೆ ಒಂದು ಅವಕಾಶ ಕೊಡಿ, ಗುಜರಾತ್ ನಲ್ಲಿ ಕೇಜ್ರಿವಾಲ್ ಪ್ರಚಾರ!
ಜಮ್ಮು , ಸಾಂಬಾ, ಕಥುವಾ, ಉದ್ದಮ್ ಪುರ್ ಮತ್ತು ರಿಯಾಸಿಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದ್ದು, ಪಿರ್ ಪಂಚಲ್ ವಲಯದ ಪೊಂಚ್, ರಾಜೌರಿ, ಚೆನಾಬ್ ಕಣಿವೆಯ ದೊಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳತ್ತ ಎಎಪಿ ಗಮನವನ್ನು ಹೆಚ್ಚಿಸುತ್ತಿದೆ. ಈ ಪ್ರದೇಶಗಳಲ್ಲಿ ಕಾಂಗ್ರೆಸ್ ದುರ್ಬಲ ಪರಿಸ್ಥಿತಿಯ ಲಾಭ ಪಡೆಯಲು ಎಎಬಿ ಕಣ್ಣಿಟ್ಟಿದೆ. ಜಮ್ಮು ವಲಯದಲ್ಲಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವುದು ಎಎಪಿ ಉದ್ದೇಶವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಇತ್ತೀಚಿಗೆ ದೊಡಾ ಜಿಲ್ಲೆಯಲ್ಲಿ ಎಎಪಿ ಬೃಹತ್ ರೋಡ್ ಶೋ ನಡೆಸಿತು. 2020ರಲ್ಲಿ ನಡೆದ ದೊಡಾ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಗೆದಿದ್ದ ಎಎಪಿ ಮುಖಂಡ ಮೆಹ್ರಾಜ್ ಮಲಿಕ್ ಇದರ ನೇತೃತ್ವ ವಹಿಸಿದ್ದರು. ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಎಎಪಿ ಜನಪ್ರಿಯತೆ ಹೆಚ್ಚಾಗಲಿದೆ ಎಂದು ಜಮ್ಮು-ಕಾಶ್ಮೀರ ಎಎಪಿ ಸಂಚಾಲಕ ಫಾರೂಖ್ ಅಹ್ಮದ್ ಬಾಂಡೆ ಹೇಳಿದ್ದಾರೆ.