ತೆರೆದ ಬಯಲಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಪೈಲಟ್ ಗಳಿಗೆ ನೀರು ಕೊಟ್ಟು ಉಪಚರಿಸಿದ ರೈತರು
ಹಿಮಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಉನಾದ ಗ್ಯಾಗ್ರೆಟ್ ವಿಧಾನಸಭಾ ಕ್ಷೇತ್ರದ ನಕಾರೊದಲ್ಲಿ ಹೆಲಿಕಾಪ್ಟರ್ ಇಳಿಸಲಾಗಿದೆ.
Published: 04th April 2022 05:05 PM | Last Updated: 04th April 2022 05:05 PM | A+A A-

ಬಯಲಲ್ಲಿ ಸೇನಾ ಹೆಲಿಕಾಪ್ಟರ್
ನವದೆಹಲಿ: ಪಠಾಣ್‌ಕೋಟ್ ಏರ್ ಬೇಸ್‌ಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್ ವೊಂದು ತೆರೆದ ಬಯಲಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಹಠಾತ್ ದೋಷ ಕಾಣಿಸಿಕೊಂಡಿದ್ದು ಅದಕ್ಕೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ಗುಜರಾತ್: ಬಿಎಸ್‌ಎಫ್ ನಿಂದ ಪಾಕಿಸ್ತಾನದ ದೋಣಿ ವಶಕ್ಕೆ, ಬೋಟ್‌ನಲ್ಲಿದ್ದ ಮೀನುಗಾರರು ಪರಾರಿ
ಹಿಮಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಉನಾದ ಗ್ಯಾಗ್ರೆಟ್ ವಿಧಾನಸಭಾ ಕ್ಷೇತ್ರದ ನಕಾರೊದಲ್ಲಿ ಹೆಲಿಕಾಪ್ಟರ್ ಇಳಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಅವರು ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸೇನೆಯ ಹೆಲಿಕಾಪ್ಟರ್ ಆಕಾಶದಲ್ಲಿ ಸುತ್ತುತ್ತಿರುವುದು ಕಂಡುಬಂದಿತ್ತು. ಕೆಲವೇ ಕ್ಷಣಗಳಲ್ಲಿ ಸೇನಾ ಹೆಲಿಕಾಪ್ಟರ್ ಖಾಲಿ ಮೈದಾನದಲ್ಲಿ ಇಳಿಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಕಾಶ್ಮೀರೇತರರ ಮೇಲೆ ಉಗ್ರರಿಂದ ದಾಳಿ: ಬಂಡಿಪೋರದಲ್ಲಿ ಐವರು ಲಷ್ಕರ್ ಉಗ್ರರನ್ನು ಬಂಧಿಸಿದ ಸೇನೆ!
ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಘಟನಾ ಸ್ಥಳದತ್ತ ಲಗ್ಗೆ ಇಟ್ಟಿದ್ದಾರೆ. ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿದ್ದು, ಭೂಶರ್ಷದ ಬಳಿಕ ಹೆಲಿಕಾಪ್ಟರ್‌ನಿಂದ ಹೊರಬಂದರು. ಅವರಿಗೆ ಗ್ರಾಮಸ್ಥರು ನೀರು ಕೊಟ್ಟು ಉಪಚರಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪೂಂಚ್‌ನ ಎಲ್‌ಒಸಿ ಬಳಿ ಉಗ್ರರ ಅಡಗುತಾಣ ಪತ್ತೆ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ