“ಬೇಬಿ ಫೈವ್ ಆಫ್ ಮಧು”: ಆಧಾರ್ ನಲ್ಲಿ ಅಸಾಮಾನ್ಯ ಹೆಸರು, ಶಾಲಾ ದಾಖಲಾತಿಗೆ ನಿರಾಕರಣೆ
ಉತ್ತರ ಪ್ರದೇಶದ ಬುಡೌನ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಗುವಿಗೆ ಪ್ರವೇಶ ನಿರಾಕರಿಸಲಾಗಿದೆ. ಏಕೆಂದರೆ ಆಕೆಯ ಹೆಸರಿನ ಬದಲಿಗೆ “ಮಧು ಕಾ ಪಂಚ್ವಾ ಬಚ್ಚಾ” ಮತ್ತು “ಬೇಬಿ ಫೈವ್ ಆಫ್ ಮಧು” ಎಂದು ಆಧಾರ್ ಕಾರ್ಡ್ನಲ್ಲಿ...
Published: 04th April 2022 06:46 PM | Last Updated: 04th April 2022 06:46 PM | A+A A-

ಸಾಂದರ್ಭಿಕ ಚಿತ್ರ
ಬುಡೌನ್(ಉತ್ತರಪ್ರದೇಶ): ಉತ್ತರ ಪ್ರದೇಶದ ಬುಡೌನ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಗುವಿಗೆ ಪ್ರವೇಶ ನಿರಾಕರಿಸಲಾಗಿದೆ. ಏಕೆಂದರೆ ಆಕೆಯ ಹೆಸರಿನ ಬದಲಿಗೆ “ಮಧು ಕಾ ಪಂಚ್ವಾ ಬಚ್ಚಾ” ಮತ್ತು “ಬೇಬಿ ಫೈವ್ ಆಫ್ ಮಧು” ಎಂದು ಆಧಾರ್ ಕಾರ್ಡ್ನಲ್ಲಿ ಬರೆಯಲಾಗಿದೆ. ಹೀಗಾಗಿ ಶಾಲೆಯಲ್ಲಿ ಮಗುವಿಗೆ ದಾಖಲಾತಿ ದೊರೆತಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಆಧಾರ್ ಕಾರ್ಡ್ ನಲ್ಲಿ ಆಧಾರ್ ಸಂಖ್ಯೆಯೂ ಇರಲಿಲ್ಲ ಎಂದಿದ್ದಾರೆ.
ಶನಿವಾರದಂದು ಬಿಲ್ಸಿ ತಾಲೂಕಿನ ರಾಯ್ಪುರ ಗ್ರಾಮದ ನಿವಾಸಿ ದಿನೇಶ್ ತನ್ನ ಮಗಳು ಆರತಿಗೆ ಪ್ರವೇಶ ಪಡೆಯಲು ಪ್ರಾಥಮಿಕ ಶಾಲೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಏಕ್ತಾ ವರ್ಷ್ನಿ ಎಂಬ ಶಿಕ್ಷಕಿ ಆ ಬಾಲಕಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಕಾರ್ಡ್ ಸರಿಪಡಿಸಿಕೊಡುವಂತೆ ಶಿಕ್ಷಕರು ದಿನೇಶ್ಗೆ ಸೂಚಿಸಿದ್ದಾರೆ.
ಇದನ್ನು ಓದಿ: ಮಾ.31'ರ ಒಳಗೆ ಪಿಎಎನ್- ಆಧಾರ್ ಜೋಡಣೆಯಾಗದೇ ಇದ್ದಲ್ಲಿ 500-1,000 ರೂ ದಂಡ!
ಜಿಲ್ಲಾಧಿಕಾರಿ ದೀಪಾ ರಂಜನ್ ಮಾತನಾಡಿ, ‘ಅಂಚೆ ಕಚೇರಿ, ಬ್ಯಾಂಕ್ ಗಳಲ್ಲಿ ಆಧಾರ್ ಕಾರ್ಡ್ ಸಿದ್ಧಪಡಿಸಲಾಗುತ್ತಿದೆ. ನಿರ್ಲಕ್ಷ್ಯದಿಂದ ಈ ಪ್ರಮಾದ ನಡೆದಿದೆ, ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ಇದೀಗ ಈ ಆಧಾರ್ ಕಾರ್ಡ್ನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.