ಕೆಲ ಷರತ್ತುಗಳೊಂದಿಗೆ ವಿದೇಶಕ್ಕೆ ತೆರಳಲು ಪತ್ರಕರ್ತೆ ರಾಣಾ ಆಯೂಬ್ ಗೆ ದೆಹಲಿ ಹೈಕೋರ್ಟ್ ಅನುಮತಿ
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಖ್ಯಾತ ಪತ್ರಕರ್ತೆ ರಾಣಾ ಆಯೂಬ್ ಗೆ ವಿದೇಶ ಪ್ರವಾಸಕ್ಕೆ ತೆರಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
Published: 04th April 2022 09:00 PM | Last Updated: 05th April 2022 01:32 PM | A+A A-

ರಾಣಾ-ಆಯೂಬ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಖ್ಯಾತ ಪತ್ರಕರ್ತೆ ರಾಣಾ ಆಯೂಬ್ ಗೆ ವಿದೇಶ ಪ್ರವಾಸಕ್ಕೆ ತೆರಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಏಪ್ರಿಲ್ 1 ರಂದು ರಾಣಾ ಅಯ್ಯೂಬ್ ಅವರನ್ನು ಲಂಡನ್‌ಗೆ ಹೋಗದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದರು. ಇದೀಗ ದೆಹಲಿ ಹೈಕೋರ್ಟ್ ಷರತ್ತುಗಳ ಅನ್ವಯ ವಿದೇಶ ಪ್ರವಾಸಕ್ಕೆ ಅನುವು ಮಾಡಿಕೊಟ್ಟಿದೆ.
ಪತ್ರಕರ್ತೆ ರಾಣಾ ಆಯೂಬ್ ಪರ ವಾದ ಮಂಡಿಸಿದ ವಕೀಲ ವೃಂದಾ ಗ್ರೋವರ್, ತನ್ನ ಕಕ್ಷಿದಾರರು ಇಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಯಾವಾಗಲೂ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ವಾದಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಯೂಬ್ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಹೇಳಿದೆ. ಆದರೆ, ಅಯ್ಯೂಬ್ ತನಿಖೆಗೆ ಸಹಕರಿಸಲು ಸಿದ್ಧರಿಲ್ಲ ಎಂಬ ಇಡಿ ವಾದವನ್ನು ವೃಂದಾ ಗ್ರೋವರ್ ನಿರಾಕರಿಸಿದ್ದಾರೆ.
ಸಾರ್ವಜನಿಕ ದಾನಿಗಳಿಂದ ಸಂಗ್ರಹಿಸಲಾದ ದತ್ತಿ ನಿಧಿಯಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧ ಪತ್ರಕರ್ತೆ ರಾಣಾ ಆಯೂಬ್ ಅವರ 1.77 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.