ಶೀಘ್ರದಲ್ಲೇ ಪಂಡಿತರು ಕಾಶ್ಮೀರಕ್ಕೆ ಮರಳಲಿದ್ದಾರೆ: ಮೋಹನ್ ಭಾಗವತ್
ಇಡೀ ರಾಷ್ಟ್ರವು ಕಾಶ್ಮೀರಿ ಪಂಡಿತರೊಂದಿಗಿದೆ ಎಂದು ಹೇಳಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶೀಘ್ರದಲ್ಲೇ ತಮ್ಮ ಮನೆಗಳಿಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.
Published: 04th April 2022 11:37 AM | Last Updated: 04th April 2022 01:35 PM | A+A A-

ಮೋಹನ್ ಭಾಗವತ್
ನವದೆಹಲಿ: ಇಡೀ ರಾಷ್ಟ್ರವು ಕಾಶ್ಮೀರಿ ಪಂಡಿತರೊಂದಿಗಿದೆ ಎಂದು ಹೇಳಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶೀಘ್ರದಲ್ಲೇ ತಮ್ಮ ಮನೆಗಳಿಗೆ ಮರಳಲಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿ ನವರೇಹ್ (ಕಾಶ್ಮೀರಿ ಹೊಸ ವರ್ಷ) ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ವಲಸೆ ಪಂಡಿತರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಹೇಳಿದರು.
“ಕಾಶ್ಮೀರ ಕಣಿವೆಯಲ್ಲಿರುವ ತಮ್ಮ ಸ್ಥಳೀಯ ಮನೆಗಳಿಗೆ ಪಂಡಿತರು ಹಿಂದಿರುಗುವ ಪ್ರತಿಜ್ಞೆಯನ್ನು ಪೂರೈಸುವ ಸಮಯ ಬಂದಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ ಪಂಡಿತರು ವಿವಿಧ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಾವು ಎಲ್ಲಿ ಬೇಕಾದರೂ ಬದುಕಬಹುದು ಆದರೆ ನಮ್ಮ ತಾಯ್ನಾಡನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಕಣಿವೆಗೆ ಕಾಶ್ಮೀರಿ ಪಂಡಿತರ ಪುನರಾಗಮನ, ಮನೆಗಳ ನಿರ್ಮಾಣ ಕಾರ್ಯ ಆರಂಭ
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥರು, ಈ ಚಿತ್ರವು “ಕಾಶ್ಮೀರಿ ಪಂಡಿತರ ಅವಸ್ಥೆ” ಮತ್ತು “ಕಾಶ್ಮೀರಿ ಹಿಂದೂ ಸಮುದಾಯದ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸುತ್ತದೆ. ನಾವೇಕೆ ಕಾಶ್ಮೀರದಿಂದ ಪದೇ ಪದೇ ಸ್ಥಳಾಂತರಗೊಳ್ಳಬೇಕಾಯಿತು? ನಮ್ಮ ನ್ಯೂನತೆಗಳೇನೇ ಇರಲಿ, ಇದಕ್ಕೆ ಕಾರಣ ಒಂದು ನಿರ್ದಿಷ್ಟ ವರ್ಗದ ಮತಾಂಧತೆ ಮತ್ತು ಈ ಧರ್ಮಾಂಧತೆಗೆ ನಮ್ಮ ಬಳಿ ಪರಿಹಾರವಿದೆ. 370 ನೇ ವಿಧಿಯನ್ನು ತೆಗೆದುಹಾಕುವುದು ಪಂಡಿತರ ಮರಳುವಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಅವರು ಪ್ರತಿಪಾದಿಸಿದರು.
ನಮ್ಮ ಪ್ರಯತ್ನಗಳಿಂದ ಆರ್ಟಿಕಲ್ 370 ಅನ್ನು ರದ್ದುಗೊಳಿಸಲಾಗಿದೆ ಮತ್ತು ಇದು ನಮ್ಮ ತಾಯ್ನಾಡಿಗೆ ಮರಳಲು ದಾರಿ ಮಾಡಿಕೊಟ್ಟಿದೆ” ಎಂದು ಭಾಗವತ್ ಹೇಳಿದರು, ಮುಂದಿನ ವರ್ಷದ ವೇಳೆಗೆ ಪಂಡಿತರು ಅವರ ಮನೆಯಲ್ಲಿರುತ್ತಾರೆ. ಪಂಡಿತರು ತಮ್ಮ ನೆರೆಹೊರೆಯವರೊಂದಿಗೆ ಮೊದಲಿನಂತೆ ಶಾಂತಿಯುತವಾಗಿ ಬಾಳುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.