ಡ್ರಗ್ ಕಳ್ಳಸಾಗಣೆ: ಕ್ರಿಪ್ಟೋ ಕರೆನ್ಸಿ ಮೂಲಕ 2.2 ಕೋಟಿ ರೂಪಾಯಿ ಪಾವತಿಯ 11 ಪ್ರಕರಣ ಪತ್ತೆ ಮಾಡಿದ ಎನ್ ಸಿಬಿ, ಸಿಬಿಐಸಿ
ನಾರ್ಕೋಟಿಕ್ಸ್ ನಿಯಂತ್ರಕ ಬ್ಯೂರೋ ಹಾಗೂ ಸಿಬಿಐಸಿ ಡ್ರಗ್ ಕಳ್ಳಸಾಗಣೆಯ 11 ಪ್ರಕರಣಗಳಲ್ಲಿ 2.2 ಕೋಟಿ ರೂಪಾಯಿ ಮೌಲ್ಯದ ಪಾವತಿಯನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಮಾಡಿರುವುದನ್ನು ಪತ್ತೆ ಮಾಡಿದೆ.
Published: 04th April 2022 05:00 PM | Last Updated: 04th April 2022 05:10 PM | A+A A-

ಕ್ರಿಪ್ಟೋ ಕರೆನ್ಸಿ
ನವದೆಹಲಿ: ನಾರ್ಕೋಟಿಕ್ಸ್ ನಿಯಂತ್ರಕ ಬ್ಯೂರೋ ಹಾಗೂ ಸಿಬಿಐಸಿ ಡ್ರಗ್ ಕಳ್ಳಸಾಗಣೆಯ 11 ಪ್ರಕರಣಗಳಲ್ಲಿ 2.2 ಕೋಟಿ ರೂಪಾಯಿ ಮೌಲ್ಯದ ಪಾವತಿಯನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಮಾಡಿರುವುದನ್ನು ಪತ್ತೆ ಮಾಡಿದೆ.
ಈ ಅಂಕಿ-ಅಂಶಗಳನ್ನು ಹಣಕಾಸು ಇಲಾಖೆ ರಾಜ್ಯ ಸಚಿವರು ಸಂಸತ್ ನಲ್ಲಿ ಹಂಚಿಕೊಂಡಿದ್ದು, ಕ್ರಿಪ್ಟೋ ಕರೆನ್ಸಿಯನ್ನು ಈ ರೀತಿ ಬಳಕೆ ಮಾಡುವುದನ್ನು ತಡೆಗಟ್ಟಲು ಸೈಬರ್ ಕ್ರೈಮ್ ಹಾಗೂ ಫೋರೆನ್ಸಿಕ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಡ್ರಗ್ ಕಳ್ಳಸಾಗಣೆಗೆ ಕ್ರಿಪ್ಟೋಕರೆನ್ಸಿ ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ತಾಂತ್ರಿಕ ತಜ್ಞರೊಂದಿಗೆ, ವಿದೇಶಿ ಔಷಧ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದ್ದಾರೆ.
ಎಐ, ಬ್ಲಾಕ್ ಚೈನ್, ಡ್ರೋನ್, ಎಆರ್/ವಿಆರ್ ಮೆಟಾವರ್ಸ್, ವೆಬ್ 3.0 ಮುಂತಾದವೂ ಸೇರಿ ಹೊಸ ತಂತ್ರಜ್ಞಾನಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಸಚಿವರು ಹೇಳಿದ್ದಾರೆ.