
ಚಂಡಿಗಢ ನಗರ
ಚಂಡಿಗಢ: ಹರಿಯಾಣದ ರಾಜಧಾನಿಯಾಗಿ ಚಂಡಿಗಢ ಮುಂದುವರಿಕೆ ಸಂಬಂಧ ಹರಿಯಾಣ ವಿಧಾನಸಭೆಯ ಒಂದು ದಿನದ ಅಧಿವೇಶನ ಸಂದರ್ಭದಲ್ಲಿ ಮಂಗಳವಾರ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು, ಹರಿಯಾಣದ ರಾಜಧಾನಿಯಾಗಿ ಮುಂದುವರೆಯುವ ಹಕ್ಕನ್ನು ಚಂಡಿಗಢ ಹೊಂದಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದರು.
ಪಂಜಾಬ್ ಪುನರ್ ವಿಂಗಡಣೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳು ಬಗೆಹರಿಯುವವರೆಗೂ ಸೌಹಾರ್ದತೆಗೆ ಧಕ್ಕೆ ತರುವಂತಹ , ಗೊಂದಲವನ್ನುಂಟು ಮಾಡುವಂತಹ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಖಟ್ಟರ್ ನಿರ್ಣಯದಲ್ಲಿ ಒತ್ತಾಯಿಸಿದ್ದಾರೆ.
Chandigarh continues to be Haryana's capital: State Assembly passes resolution
Read @ANI Story | https://t.co/irEJ7gOwBC#Chandigarh #Haryana #HaraynaAssemblysession pic.twitter.com/y0F57lpf2t— ANI Digital (@ani_digital) April 5, 2022
ಸಟ್ಲೆಜ್ ಯಮುನಾ ಜೋಡಣೆ ಕಾಲುವೆ ನೀರು ಪಡೆಯುವವರೆಗೂ, ಹೊಸ ರಾಜಧಾನಿ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಹಣ ಬರುವವರೆಗೂ ಚಂಡಿಗಢವೇ ಹರಿಯಾಣ ರಾಜಧಾನಿಯಾಗಿ ಮುಂದುವರೆಯಲಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಚಂಡಿಗಢವನ್ನು ಪಂಜಾಬ್ ರಾಜ್ಯದೊಳಗೆ ವರ್ಗಾಯಿಸುವಂತೆ ಕೋರುವ ನಿರ್ಣಯವೊಂದನ್ನು ಏಪ್ರಿಲ್ 1 ರಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿಧಾನಸಭೆಯಲ್ಲಿ ಮಂಡಿಸಿದ್ದರು.