ಬಿಜೆಪಿ ನನಗೆ ದ್ರೋಹ ಮಾಡಿದೆ, ಮೈತ್ರಿಗೆ ಯಾವುದೇ ಅರ್ಥವಿಲ್ಲ: ಚಿರಾಗ್ ಪಾಸ್ವಾನ್ ವಾಗ್ದಾಳಿ

ಕಳೆದ ವಾರ ತಂದೆಗೆ ನೀಡಿದ್ದ ಬಂಗಲೆಯಿಂದ ಹೊರಹಾಕಲ್ಪಟ್ಟ ಎಲ್ ಜೆಪಿ ಸಂಸದ ಚಿರಾಗ್ ಪಾಸ್ವಾನ್ ಬಿಜೆಪಿ ನನಗೆ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Published: 05th April 2022 08:32 PM  |   Last Updated: 05th April 2022 08:32 PM   |  A+A-


ಚಿರಾಗ್ ಪಾಸ್ವಾನ್

Online Desk

ನವದೆಹಲಿ: ಕಳೆದ ವಾರ ತಂದೆಗೆ ನೀಡಿದ್ದ ಬಂಗಲೆಯಿಂದ ಹೊರಹಾಕಲ್ಪಟ್ಟ ಎಲ್ ಜೆಪಿ ಸಂಸದ ಚಿರಾಗ್ ಪಾಸ್ವಾನ್ ಬಿಜೆಪಿ ನನಗೆ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿಯ 12 ಜನಪಥ್ ರಸ್ತೆಯಲ್ಲಿರುವ ಬಂಗಲೆಯಿಂದ ತನ್ನ ಕುಟುಂಬವನ್ನು ಹೊರಹಾಕಿ, ಅವಮಾನಿಸಿದ್ದು ಇದರಿಂದ ನಮಗೆ ಮೋಸವಾಗಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದರು. ನನ್ನ ತಂದೆಗೆ ನೀಡಿದ್ದ ಬಂಗಲೆಯಲ್ಲಿರಲು ನಾನು ಅರ್ಹನಾಗಿರಲಿಲ್ಲ. ಹೀಗಾಗಿ ಬಂಗಲೆಯನ್ನ ನಾನೇ ಖಾಲಿ ಮಾಡಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಸೇರಿದ ಯಾವ ಸೌಕರ್ಯವೂ ಶಾಶ್ವತವಾಗಿರಲು ಸಾಧ್ಯವಿಲ್ಲ ಮತ್ತು ಅದನ್ನು ನಮ್ಮ ಸ್ವಂತದ್ದೆಂದು ನಾವು ಎಂದಿಗೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಇಷ್ಟು ವರ್ಷಗಳ ಕಾಲ ಇಲ್ಲಿ ಉಳಿಯಲು ನಾನು ಅದೃಷ್ಟಶಾಲಿಯಾಗಿದ್ದೆ. ನನ್ನ ತಂದೆ ಇಲ್ಲಿ ಸುದೀರ್ಘ ಕಾಲದವರೆಗೆ ಇದ್ದು ರಾಜಕೀಯದಲ್ಲಿ ಪ್ರಗತಿ ಸಾಧಿಸಿದ್ರು. ಈ ಮನೆ ಪ್ರಾಯೋಗಿಕವಾಗಿ ಸಾಮಾಜಿಕ ನ್ಯಾಯದ ಜನ್ಮಸ್ಥಳವಾಗಿದೆ,” ಎಂದು ಚಿರಾಗ್ ಪಾಸ್ವಾನ್ ಹೇಳಿದರು.

'ಲಾಕ್‌ಡೌನ್ ಸಮಯದಲ್ಲಿ, ನನ್ನ ತಂದೆ ಆ ಮನೆಯಿಂದ ರಸ್ತೆಯಲ್ಲಿರುವ ವಲಸಿಗರನ್ನು ನೋಡುತ್ತಿದ್ದರು ಮತ್ತು ಅವರ ಬಗ್ಗೆ ಚಿಂತಿಸುತ್ತಿದ್ದರು. ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸಿ ಅವರಿಗೆ ನೆರವಾಗುವಂತೆ ಪ್ರಧಾನಿಗೆ ಕರೆ ಮಾಡಿದ್ದರು.  ಮನೆಯನ್ನು ಕಳೆದುಕೊಂಡ ಬಗ್ಗೆ ನನಗೆ ಬೇಸರವಿಲ್ಲ. ಅದು ಎಂದಾದರೂ ಹೋಗುತ್ತಿತ್ತು. ಆದರೆ ಅಲ್ಲಿಂದ ನನ್ನನ್ನು ತೆರವುಗೊಳಿಸಿದ ರೀತಿಯನ್ನು ನಾನು ವಿರೋಧಿಸುತ್ತೇನೆ.

ಬಂಗಲೆ ತೆರವು ಮಾಡಲು ಮಾರ್ಚ್ 20ರ ಗಡುವು ಇತ್ತು. ಅದರ ಹಿಂದಿನ ದಿನವೇ ಹೊರಡಲು ನಾನು ಸಿದ್ಧನಾಗಿದ್ದೆ. ಮನೆಯಿಂದ ಹೊರಗೆ ಹೋಗದಂತೆ ತಡೆದು ಆಶ್ವಾಸನೆ ಕೊಟ್ಟಿದ್ದೇಕೆ ಎಂದು ಗೊತ್ತಾಗುತ್ತಿಲ್ಲ ಎಂದು ಚಿರಾಗ್ ಹೇಳಿದರು. ಅವರು ನನ್ನ ತಂದೆಯ ಫೋಟೋವನ್ನು ಎಸೆದರು, ಅವು ನಮ್ಮ ಅಚ್ಚುಮೆಚ್ಚಿನ ಫೋಟೋಗಳು. ಚಪ್ಪಲಿ ಕಾಲಿನೊಂದಿಗೆ ಪೋಟೋಗಳನ್ನು ತುಳಿದರು. ಈ ವರ್ಷ ನೀವು ಪದ್ಮಭೂಷಣ ನೀಡಿದವರಿಗೆ ಈ ರೀತಿಯ ಅವಮಾನ ಮಾಡುವ ಮೂಲಕ ಅವರ ಸ್ಮರಣೆಯನ್ನು ಅವಮಾನಿಸಿದಿರಿ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ರು.

ಪ್ರಧಾನಿ ನರೇಂದ್ರ ಮೋದಿಯವರ ಶ್ರೀರಾಮನಿಗೆ ನೀವು 'ಹನುಮಾನ್' ಆಗಿ ಮುಂದುವರೆಯುತ್ತೀರಾ ಎಂಬ ಪ್ರಶ್ನೆಗೆ 'ಕಳೆದ ಒಂದೂವರೆ ವರ್ಷಗಳಲ್ಲಿ ನಾನು ನನ್ನದೇ ಆದ ಹಾದಿಯಲ್ಲಿದ್ದೇನೆ, ಪರಸ್ಪರ ಗೌರವ ಇಲ್ಲದಿರುವ ಮೈತ್ರಿಯಲ್ಲಿ ಯಾವುದೇ ಅರ್ಥವಿಲ್ಲ' ಎನ್ನುವ ಮೂಲಕ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ.

ಚಿರಾಗ್ ಪಾಸ್ವಾನ್ ರನ್ನ ಬಂಗಲೆಯಿಂದ ಹೊರಹಾಕಿದ್ದಕ್ಕೆ ಬಿಜೆಪಿ ಹನುಮಂತನ ಮನೆಗೆ ಬೆಂಕಿ ಹಚ್ಚಿದೆ ಎಂದು ಇತ್ತೀಚಿಗೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೇಂದ್ರ ಸರ್ಕಾರದ ನಡೆಯನ್ನ ಟೀಕಿಸಿದರು.


Stay up to date on all the latest ರಾಷ್ಟ್ರೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • M U Jagadeesha

    NDA yinda horage, nimma atiaseyinda, pratyekavagi Bihar shasanasabhege spardisi sotiddiri. Tandege Kitts bangaleyalli Italy arhanalla, name bidalu nirdharisidde enda mele, tande sattu illiyavarege yakiddiri? BJP yalla droha bagedirivudu, nivu BJP ge droha baghediri.
    2 months ago reply
flipboard facebook twitter whatsapp