
ಸಂಸದೆ ಪ್ರಿಯಾಂಕಾ ಚತುರ್ವೇದಿ
ನವದೆಹಲಿ: ನರ್ಸಿಂಗ್ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಕುರೂಪಿ ಹೆಣ್ಣುಮಕ್ಕಳ ಮದುವೆಗೆ ಡೌರಿ ಸಹಕಾರಿ ಎಂದು ಬರೆಯಲಾಗಿದ್ದು ಈ ಬಗ್ಗೆ ಮಹಾರಾಷ್ಟ್ರ ಸಂಸದೆ ಪ್ರಿಯಾಂಕಾ ಚತುರ್ವೇದಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೆರೆದ ಬಯಲಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಪೈಲಟ್ ಗಳಿಗೆ ನೀರು ಕೊಟ್ಟು ಉಪಚರಿಸಿದ ರೈತರು
ಸಾಮಾಜಿಕ ಜಾಲತಾಣಗಳಲ್ಲಿ ಪಠ್ಯಪುಸ್ತಕದ ಆ ಪುಟಗಳನ್ನು ಶೇರ್ ಮಾಡಲಾಗುತ್ತಿದ್ದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಪ್ರಿಯಾಂಕಾ ಚತುರ್ವೇದಿ ಅವರು ಈ ಸಂಗತಿಯನ್ನು ಕೇಂದ್ರ ಶಿಕ್ಷಣ ಸಚಿವರ ಗಮನಕ್ಕೆ ತಂದು ಕೂಡಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಗೆ ಎರಡನೇ ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ
ಹೊಸದಾಗಿ ಸಂಸಾರ ಶುರು ಮಾಡುವ ದಂಪತಿಗಳಿಗೆ ಡೌರಿ ಆರ್ಥಿಕ ನೆರವನ್ನು ಒದಗಿಸುತ್ತದ ಎನ್ನುವ ಸಾಲುಗಳೂ ಆ ಪಠ್ಯಪುಸ್ತಕದಲ್ಲಿದೆ. ಶಿಕ್ಷಣದಿಂದ ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗುತ್ತಾರೆ ಎನ್ನುವ ಉದ್ದೇಶ ನಮ್ಮ ನಡುವೆ ಬೇರೂರುತ್ತಿರುವ ನಡುವೆ ಈ ಬಗೆಯ ಸಂಗತಿಗಳು ಪಠ್ಯಪುಸ್ತಕದಲ್ಲಿ ಇರುವುದು ನಾಚೆಕೆಗೇಡಿನ ಸಂಗತಿ ಎಂದು ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮದುವೆ ಫೋಟೊ ಶೂಟ್ ಸ್ಥಳದಲ್ಲಿ ಕಾಲು ಜಾರಿ ನದಿಗೆ ಬಿದ್ದ ನವದಂಪತಿ: ಪತಿ ಸಾವು, ಪತ್ನಿಯ ರಕ್ಷಣೆ