
ಕನಿಕಾ ಮತ್ತು ರೆಜಿ ಲಾಲ್
ಕೊಚ್ಚಿ: ಹೊಸದಾಗಿ ಮದುವೆಯಾಗಿದ್ದ ಯುವಕ ಯುವತಿ ಕಾಲು ಜಾರಿ ನದಿಗೆ ಬಿದ್ದ ಘಟನೆ ಕೇರಳದ ಕಡಿಯಂಗಾಡ್ ಎಂಬಲ್ಲಿ ನಡೆದಿದೆ. ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಯುವತಿಯನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಬಾಲಕ ಸಾವು
ರೆಜಿಲಾಲ್ ಎಂಬಾತ ಮೃತ ಪಟ್ಟ ದುರ್ದೈವಿ. ಕೆಲ ದಿನಗಳ ಹಿಂದಷ್ಟೆದೇ ಕುಟ್ಟಿಯಾಡಿ ನದಿಯ ತಟದಲ್ಲಿ ನಡೆದ ಫೋಟೊ ಶೂಟಿನಲ್ಲಿ ಇಬ್ಬರೂ ಭಾಗಿಯಾಗಿದ್ದರು. ಮದುವೆ ನಂತರ ಮತ್ತೊಮ್ಮೆ ಆ ಸ್ಥಳಕ್ಕೆ ಭೇಟಿ ನೀಡಲು ನವದಂಪತಿ ಆಶಿಸಿದ್ದರು.
ಇದನ್ನೂ ಓದಿ: ಬಾಲಿವುಡ್ ನಟಿ ಮಲೈಕಾ ಅರೋರಾ ಕಾರು ಅಪಘಾತ: ಆಸ್ಪತ್ರೆಗೆ ದಾಖಲು!
ಹೀಗಾಗಿ ನವದಂಪತಿ ತಮ್ಮ ಸಂಬಂಧಿಕರ ಜೊತೆ ಮುಂಜಾನೆ ಕುಟ್ಟಿಯಾಡಿ ನದಿ ಬಳಿಗೆ ತೆರಳಿದ್ದರು. ಈ ವೇಳೆ ಅಲ್ಲಿನ ಕಲ್ಲು ಬಂಡೆಯೊಂದರ ಮೇಲೆ ದಂಪತಿ ತೆರಳಿದ್ದರು. ಆಗ ಕಾಲು ಜಾರಿ ಇಬ್ಬರೂ ಬಿದ್ದಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಈಜು ತರಬೇತಿ; ಗಂಗಾಧರ್ ಕಡೇಕಾರ್ ವಿಭಿನ್ನ ಸೇವಾ ಮನೋಭಾವ!
ಅದೇ ದಾರಿಯಲ್ಲಿ ಲಾರಿ ಚಾಲಕನೊಬ್ಬ ಬಂದಿದ್ದ. ಆತ ನದಿಗೆ ಹಾರಿ ಯುವತಿಯನ್ನು ರಕ್ಷಿಸಲು ಸಫಲನಾದ. ಆದರೆ ಯುವಕ ರೆಜಿಲಾಲ್ ಅಷ್ಟರಲ್ಲಾಗಲೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉರಿಯುತ್ತಿರುವ ಮನೆಯಿಂದ ಮಗುವನ್ನು ರಕ್ಷಿಸಿದ ಪೊಲೀಸ್ ಕಾನ್ಸ್ ಟೇಬಲ್: ಸಾಹಸಕ್ಕೆ ಸಿ.ಎಂ ಮೆಚ್ಚುಗೆ