ರಾಜ್ ಠಾಕ್ರೆ ಕೋಮುವಾದಿ: ಎಂಎನ್ಎಸ್ ತೊರೆದ ಮುಸ್ಲಿಂ ನಾಯಕ
ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೋಮುವಾದಿ ಧೋರಣೆ ಅನುಸರಿಸುತ್ತಿದ್ದು, ಅವರು ಕೋಮುವಾದಿಯಾಗಿ ಬದಲಾಗಿದ್ದಾರೆ ಎಂದು ಆರೋಪಿಸಿ ಎಂಎನ್ಎಸ್ ಮುಸ್ಲಿಂ ನಾಯಕರೊಬ್ಬರು ಪಕ್ಷ ತ್ಯಜಿಸಿದ್ದಾರೆ.
Published: 05th April 2022 02:54 PM | Last Updated: 05th April 2022 02:54 PM | A+A A-

ರಾಜ್ ಠಾಕ್ರೆ
ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೋಮುವಾದಿ ಧೋರಣೆ ಅನುಸರಿಸುತ್ತಿದ್ದು, ಅವರು ಕೋಮುವಾದಿಯಾಗಿ ಬದಲಾಗಿದ್ದಾರೆ ಎಂದು ಆರೋಪಿಸಿ ಎಂಎನ್ಎಸ್ ಮುಸ್ಲಿಂ ನಾಯಕರೊಬ್ಬರು ಪಕ್ಷ ತ್ಯಜಿಸಿದ್ದಾರೆ.
ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ತೆಗೆಯದಿದ್ರೆ ಹನುಮಾನ್ ಚಾಲೀಸ ಹಾಕ್ತೀವಿ: ಠಾಕ್ರೆ ಎಚ್ಚರಿಕೆ
ಮಹಾರಾಷ್ಟ್ರ ನವನಿರ್ಮಾಣ ಸೇನೆಯು ರಾಜ್ಯದ ಅಭಿವೃದ್ಧಿಯ ಬದಲು ಕೋಮುವಾದಿ ಧೋರಣೆಯನ್ನು ಸಾಧಿಸುತ್ತಿದೆ ಎಂದು ಆರೋಪಿಸಿದ ಪುಣೆಯ ಎಂಎನ್ಎಸ್ ಮುಖಂಡ ಮಜೀದ್ ಶೇಖ್ ಮಂಗಳವಾರ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಮುಖ್ಯಸ್ಥ ರಾಜ್ ಠಾಕ್ರೆ ಅವರ ರಾಜಕೀಯ ನಿಲುವು ಬದಲಾಗಿದೆ ಎಂದು ಉಲ್ಲೇಖಿಸಿ ಪಕ್ಷಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಮುಂಬೈ: ಮಸೀದಿಗಳಿಂದ ಧ್ವನಿ ವರ್ಧಕ ತೆರವಿಗೆ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಒತ್ತಾಯ
“ಕಳೆದ ಕೆಲವು ದಿನಗಳಿಂದ, ಅಭಿವೃದ್ಧಿ, ಹಣದುಬ್ಬರ, ಮಹಿಳಾ ಸಬಲೀಕರಣ, ನಿರುದ್ಯೋಗದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಪಕ್ಷವು ಕೋಮುವಾದದ ಕಡೆ ಹೆಚ್ಚು ಗಮನಹರಿಸಿರುವುದರಿಂದ ನಾನು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ಶೇಖ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ದುರ್ಗಾದೇವಿಗೆ ಮೀಸಲಾದ ನವರಾತ್ರಿಯ ಮಂಗಳಕರ ಅವಧಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಬೇಕು!
ಠಾಕ್ರೆಯವರ ರಾಜಕೀಯ ನಿಲುವು ಅಭಿವೃದ್ಧಿಯಿಂದ ಕೋಮುವಾದಕ್ಕೆ ಬದಲಾಗಿದೆ. ರಾಜ್ ಸಾಹೇಬ್ ಅವರು ಮಹಾರಾಷ್ಟ್ರದ ನೀಲನಕ್ಷೆ ಮತ್ತು ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾಗ ನನಗೆ ಐಕಾನ್ ಆಗಿದ್ದರು ಮತ್ತು ಅದಕ್ಕಾಗಿಯೇ ನಾನು 2009 ರಲ್ಲಿ ಅವರ ಪಕ್ಷ ಸೇರಿದ್ದೆ. ಆದರೆ ಈಗ ಅವರ ರಾಜಕೀಯ ನಿಲುವು ಬದಲಾಗಿದೆ ಮತ್ತು ಕೋಮುವಾದ ರಾಜಕೀಯ ಪಕ್ಷದಲ್ಲಿ ಹರಿದಾಡುತ್ತಿದೆ ಮತ್ತು ಅದಕ್ಕಾಗಿಯೇ ನಾನು ರಾಜೀನಾಮೆ ನೀಡಿದ್ದೇನೆ ಎಂದು ಶೇಖ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.