'ಇಷ್ಟಪಟ್ಟಾಗಲೆಲ್ಲಾ ಮಾಂಸಾಹಾರ ಸೇವಿಸಲು ಸಂವಿಧಾನ ಅವಕಾಶ ಕೊಟ್ಟಿದೆ'- ಟಿಎಂಸಿ ಸಂಸದೆ
ನವರಾತ್ರಿ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಹೊರಡಿಸಿರುವ ಆದೇಶದ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕಿಡಿಕಾರಿದ್ದಾರೆ.
Published: 06th April 2022 04:37 PM | Last Updated: 06th April 2022 04:37 PM | A+A A-

ಮಹುವಾ ಮೊಯಿತ್ರಾ
ಕೊಲ್ಕತ್ತಾ: ನವರಾತ್ರಿ ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಹೊರಡಿಸಿರುವ ಆದೇಶದ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕಿಡಿಕಾರಿದ್ದಾರೆ.
ಎಸ್ ಡಿಎಂಸಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹುವಾ ಮೊಯಿತ್ರಾ, ನಾನು ಇಷ್ಟಪಟ್ಟಾಗಲೆಲ್ಲಾ ಮಾಂಸ ತಿನ್ನಲು ಸಂವಿಧಾನ ನನಗೆ ಅವಕಾಶ ನೀಡಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೊಯಿತ್ರಾ, ನಾನು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಸಂವಿಧಾನ ನನಗೆ ಇಷ್ಟವಾದಾಗ ಮಾಂಸಾಹಾರ ಸೇವಿಸಲು ಅವಕಾಶ ನೀಡಿದೆ ಮತ್ತು ಅಂಗಡಿಯವನು ತನ್ನ ವ್ಯಾಪಾರವನ್ನು ನಡೆಸಲು ಸ್ವಾತಂತ್ರ್ಯವನ್ನು ನೀಡಿದೆ ಎಂದು ಹೇಳಿದ್ದಾರೆ.
I live in South Delhi.
— Mahua Moitra (@MahuaMoitra) April 6, 2022
The Constitution allows me to eat meat when I like and the shopkeeper the freedom to run his trade.
Full stop.
ನವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಾಂಸಾಹಾರ ಸೇವಿಸಲ್ಲ. ಹಾಗಾಗಿ ದಕ್ಷಿಣ ಮತ್ತು ಪೂರ್ವ ದೆಹಲಿಯ ಮೇಯರ್ ಮಂಗಳವಾರ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಮಾಂಸದ ಅಂಗಡಿಗಳು ಮುಚ್ಚಬೇಕು ಎಂದು ಆದೇಶಿಸಿದ್ದರು.