
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ಗೂಗಲ್ ಮ್ಯಾಪ್ಸ್ ನಲ್ಲಿಯೇ ಟೋಲ್ ದರಗಳ ಮಾಹಿತಿಯನ್ನು ನೀಡಲು ಗೂಗಲ್ ಸಂಸ್ಥೆ ನಿರ್ಧರಿಸಿದೆ. ಯಾವ ಟೋಲ್ ಮಾರ್ಗದಲ್ಲಿ ನಿಗದಿತ ಸ್ಥಳ ತಲುಪಿದರೆ ಕಡಿಮೆ ವೆಚ್ಚ ತಗುಲುತ್ತದೆ ಎನ್ನುವ ಸಜೆಷನ್ ಅನ್ನೂ ಗೂಗಲ್ ಮ್ಯಾಪ್ಸ್ ನೀಡಲಿದೆ.
ಇದನ್ನೂ ಓದಿ: ಟ್ವಿಟರ್ ನಲ್ಲಿ ಕೊನೆಗೂ ಬರಲಿದೆ ಎಡಿಟ್ ಬಟನ್: ಖಚಿತ ಪಡಿಸಿದ ಸಂಸ್ಥೆ
ಮುಂದಿನ ಗೂಗಲ್ ಮ್ಯಾಪ್ಸ್ ಅಪ್ ಡೇಟ್ ವೇಳೆಗೆ ಅಂದರೆ ಈ ತಿಂಗಳು ಈ ಹೊಸ ಸವಲತ್ತನ್ನು ಸೇರಿಸಲಾಗಿರುತ್ತದೆ. ಗೂಗಲ್ ಮ್ಯಾಪ್ಸ್ ಆಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಕೆದಾರರು ಈ ಸವಲತ್ತನ್ನು ತಮ್ಮ ಮೊಬೈಲಿನಲ್ಲೇ ಪಡೆಯಬಹುದು.
ಇದನ್ನೂ ಓದಿ: ಬೆಂಗಳೂರು: ಪರಿಸರಸ್ನೇಹಿ ಯುಲು ಇ- ಬೈಕ್ ಜೊತೆಗಿನ ಒಪ್ಪಂದ ಕೈಬಿಟ್ಟ ಅಂಚೆ ಇಲಾಖೆ
ಮೊದಲ ಹಂತದಲ್ಲಿ ಭಾರತ, ಅಮೆರಿಕ, ಜನಾನ್ ಮತ್ತು ಇಂಡೊನೇಷ್ಯಾ ದೇಶಗಳಲ್ಲಿ ಟೋಲ್ ಮಾಹಿತಿ ನೀಡಿಕೆ ಸವಲತ್ತನ್ನು ಗೂಗಲ್ ಜಾರಿಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದೇಶಗಳಿಗೆ ಈ ಸೇವೆಯನ್ನು ವಿಸ್ತರಿಸಲಿದೆ.
ಇದನ್ನೂ ಓದಿ: ಏರ್ ಟೆಲ್ ನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದು