ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ದೆಹಲಿ - ಮಾಸ್ಕೋ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ
ಏರ್ ಇಂಡಿಯಾ ದೆಹಲಿಯಿಂದ ಮಾಸ್ಕೋಗೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ ಕಾರಣ...
Published: 07th April 2022 03:36 PM | Last Updated: 07th April 2022 03:36 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಏರ್ ಇಂಡಿಯಾ ದೆಹಲಿಯಿಂದ ಮಾಸ್ಕೋಗೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ ಕಾರಣ ವಿಮಾ ರಕ್ಷಣೆ ಪಡೆಯಲು ಸಾಧ್ಯವಾಗದ ಕಾರಣ ಏರ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ-ಮಾಸ್ಕೋ-ದೆಹಲಿ ಮಾರ್ಗದಲ್ಲಿ ಟಿಕೆಟ್ ಗಳ ಮಾರಾಟವನ್ನು ನಿಲ್ಲಿಸಿದೆ ಮತ್ತು ವಿಮಾನದ ಭವಿಷ್ಯವು ಅಸ್ಪಷ್ಟವಾಗಿದೆ ಎಂದು ರಷ್ಯಾದ ರಾಯಭಾರ ಕಚೇರಿ ಬುಧವಾರ ವರದಿ ಮಾಡಿದೆ.
ಇದನ್ನು ಓದಿ: ವೆಜ್ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದ ಏರ್ ಇಂಡಿಯಾ
“ಆತ್ಮೀಯ ಸಹ ನಾಗರಿಕರೇ, ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ-ಮಾಸ್ಕೋ-ದೆಹಲಿ ಮಾರ್ಗದ ಟಿಕೆಟ್ ಮಾರಾಟ ಮಾಡುವುದನ್ನು ನಿಲ್ಲಿಸಿದೆ ಎಂದು ನಾವು ನಿಮ್ಮ ಗಮನಕ್ಕೆ ತರುತ್ತೇವೆ. ಈ ಏರ್ಲೈನ್ನಿಂದ ರಷ್ಯಾಕ್ಕೆ ವಿಮಾನಗಳ ಪುನರಾರಂಭದ ನಿರೀಕ್ಷೆಗಳು ಸದ್ಯಕ್ಕೆ ಅನಿಶ್ಚಿತವಾಗಿವೆ. ಏರ್ ಇಂಡಿಯಾ ಕಚೇರಿ ಪ್ರಕಾರ, ರದ್ದಾದ ವಿಮಾನಗಳ ಸಂಪೂರ್ಣ ಮರುಪಾವತಿಗೆ ಪ್ರಯಾಣಿಕರು ಅರ್ಹರಾಗಿರುತ್ತಾರೆ” ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಆದಾಗ್ಯೂ, ತಾಷ್ಕೆಂಟ್, ಇಸ್ತಾಂಬುಲ್, ದುಬೈ, ಅಬುಧಾಬಿ, ದೋಹಾ ಮತ್ತು ಇತರ ಸ್ಥಳಗಳ ಮೂಲಕ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೆಹಲಿಯಿಂದ ಮಾಸ್ಕೋಗೆ ಹಾರಾಟ ಆರಂಭಿಸಲು ಇನ್ನೂ ಸಾಧ್ಯವಿದೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಿದ್ದವು. ಆದಾಗ್ಯೂ, ಏರ್ ಇಂಡಿಯಾ ವಾರಕ್ಕೆ ಎರಡು ಬಾರಿ ದೆಹಲಿ-ಮಾಸ್ಕೋ ವಿಮಾನ ಹಾರಾಟ ನಡೆಸುತ್ತಿತ್ತು. ಇದೀಗ ಅದನ್ನು ರದ್ದುಗೊಳಿಸಿದೆ.