ಆಕಾರ್ ಪಟೇಲ್ ಮೇಲಿನ 'ಲುಕ್ ಔಟ್ ನೋಟಿಸ್' ನಿಷೇಧವನ್ನು ಹಿಂಪಡೆಯಿರಿ: ಸಿಬಿಐಗೆ ಕೋರ್ಟ್ ಸೂಚನೆ!
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಆರ್ಸಿಎ) ಉಲ್ಲಂಘನೆ ಆರೋಪದ ಮೇಲೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಬೋರ್ಡ್ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಲುಕ್ ಔಟ್ ನೋಟಿಸ್ ಅನ್ನು (ಎಲ್ಒಸಿ) ಹಿಂಪಡೆಯುವಂತೆ ದೆಹಲಿ ನ್ಯಾಯಾಲಯವು ಸಿಬಿಐ ಸೂಚಿಸಿದೆ.
Published: 07th April 2022 07:47 PM | Last Updated: 08th April 2022 01:19 PM | A+A A-

ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆಕರ್ ಪಟೇಲ್
ಬೆಂಗಳೂರು: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಆರ್ಸಿಎ) ಉಲ್ಲಂಘನೆ ಆರೋಪದ ಮೇಲೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಬೋರ್ಡ್ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಲುಕ್ ಔಟ್ ನೋಟಿಸ್ ಅನ್ನು (ಎಲ್ಒಸಿ) ಹಿಂಪಡೆಯುವಂತೆ ದೆಹಲಿ ನ್ಯಾಯಾಲಯವು ಸಿಬಿಐ ಸೂಚಿಸಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಪವನ್ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಸರಣೆ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ್ದಾರೆ.
ಅಂಕಣಕಾರ ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರ ಆಕಾರ್ ಅನಿಲ್ ಪಟೇಲ್ ಅಮೆರಿಕಕ್ಕೆ ತೆರಳದಂತೆ ಬುಧವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದರು.
ಈ ಸಂಬಂಧ ಮೇ 30ರವರೆಗೆ ವಿವಿಧ ವಿಶ್ವವಿದ್ಯಾನಿಲಯಗಳು ಆಯೋಜಿಸಿರುವ ಅವರ ವಿದೇಶಿ ಕಾರ್ಯಯೋಜನೆಗಳು ಮತ್ತು ಉಪನ್ಯಾಸ ಸರಣಿಗಳನ್ನು ತೆಗೆದುಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಪಟೇಲ್ ಕೋರ್ಟ್ ಗೆ ಅರ್ಜಿ ಹಾಕಿದ್ದರು.
ವಿಚಾರಣೆ ವೇಳೆ ಆಕಾರ್ ಪಟೇಲ್ ಓರ್ವ ಪ್ರಭಾವಿ ವ್ಯಕ್ತಿ. ಅವರನ್ನು ವಿದೇಶಕ್ಕೆ ತೆರಳಲು ಬಿಟ್ಟರೆ ನ್ಯಾಯಾಂಗದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಎಂದು ಹೇಳಿತ್ತು. ಇದಕ್ಕೆ ಕೋರ್ಟ್ 2021ರಿಂದ ಸಿಬಿಐ ತನಿಖೆ ನಡೆಯುತ್ತಿದೆ. ಪಟೇಲ್ ವಿದೇಶಕ್ಕೆ ಪರಾರಿಯಾಗುವ ಅಪಾಯವಿದ್ದಲ್ಲಿ ಅವರನ್ನು ಬಂಧಿಸಬಹುದಿತ್ತು. ಪಲಾಯನವಾಗಬೇಕಿದ್ದರೆ ಅವರು ಬಹಳ ಹಿಂದೆಯೇ ಪಲಾಯನ ಮಾಡಬಹುದಿತ್ತು ಎಂದು ಹೇಳಿದೆ. ಇನ್ನು ಸಿಬಿಐ ನಾಗರಿಕರನ್ನು ತನಿಖೆ ಮಾಡುತ್ತಿದೆ ಎಂದು ಪಟೇಲ್ ಪರ ವಕೀಲರು ವಾದಿಸಿದರು.
ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧದ ಮೂರು ಟ್ವೀಟ್ ಗಳಿಗಾಗಿ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ 2020ರ ಜೂನ್ 2ರಂದು ಆಕಾರ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.