ಜನ ಇಷ್ಟಬಂದಂಗೆ ಹೇಳ್ಕೋತಿರ್ತಾರೆ: ಸುಪ್ರಿಯ ಸುಳೆ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್ ಕುರಿತು ಶಶಿ ತರೂರ್ ಮಾತು!
ಲೋಕಸಭೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ "ಕುಚ್ ತೋ ಲೋಗ್ ಕಹೆಂಗೆ, ಪೀಪಲ್ ಕಾ ಕಾಮ್ ಹೈ ಕೆಹನಾ ಹೈ" ಎಂದು ಹೇಳಿದ್ದಾರೆ.
Published: 07th April 2022 10:36 PM | Last Updated: 08th April 2022 01:21 PM | A+A A-

ಸುಪ್ರಿಯಾ ಸುಳೆ-ಶಶಿ ತರೂರ್
ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ "ಕುಚ್ ತೋ ಲೋಗ್ ಕಹೆಂಗೆ, ಪೀಪಲ್ ಕಾ ಕಾಮ್ ಹೈ ಕೆಹನಾ ಹೈ" ಎಂದು ಹೇಳಿದ್ದಾರೆ.
ಸುಪ್ರಿಯಾ ಸುಳೆ ಜೊತೆ ನೀತಿ ಸಂಬಂಧಿತ ಪ್ರಶ್ನೆಯೊಂದರ ಬಗ್ಗೆ ಚರ್ಚಿಸುತ್ತಿದ್ದೆ ಎಂದು ಶಶಿತರೂರ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಮಂಗಳವಾರ ಲೋಕಸಭೆಯಲ್ಲಿ ನಿಯಮ 193ರ ಅಡಿಯಲ್ಲಿ ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಕುರಿತು ಚರ್ಚೆಯ ಸಮಯವದು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಸದನದಲ್ಲಿ ಮಾತನಾಡುತ್ತಿರುವುದು ಮತ್ತು ಅದೇ ಸಮಯದಲ್ಲಿ ಅವರ ಹಿಂದೆ ಕುಳಿತು ಸುಪ್ರಿಯಾ ಮತ್ತು ತರೂರ್ ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
It was a great speech by Farooq Abdullah. Must listen for everyone. @ShashiTharoor pic.twitter.com/STQe0yulxG
— Farrago Abdullah (@abdullah_0mar) April 6, 2022
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋ ಕುರಿತು ಟ್ವೀಟ್ ಮಾಡಿರುವ ತರೂರ್, 'ಲೋಕಸಭೆಯಲ್ಲಿ ನನ್ನ ಮತ್ತು ಸುಪ್ರಿಯಾ ಸುಳೆ ನಡುವಿನ ಸಂಕ್ಷಿಪ್ತ ಸಂಭಾಷಣೆಯನ್ನು ಆನಂದಿಸುತ್ತಿರುವವರಿಗೆ, ಅವರು ಮುಂದಿನವರು ಆಗಲಿರುವ ಕಾರಣ ನೀತಿಗೆ ಸಂಬಂಧಿಸಿದ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದಾರೆ ಎಂದು ನಾನು ತಿಳಿಸಲು ಬಯಸುತ್ತೇನೆ. ಫಾರೂಕ್ ಅವರು ವಿಚಲಿತರಾಗದಂತೆ ಸುಪ್ರಿಯಾ ನಿಧಾನವಾಗಿ ಮಾತನಾಡುತ್ತಿದ್ದರು. ನಾನು ಸುಪ್ರಿಯಾ ಮಾತನ್ನು ಕೇಳಲು ನಮಸ್ಕರಿಸಿದ್ದೇನೆ ಎಂದು ಟ್ವೀಟಿಸಿದ್ದಾರೆ.
ನಂತರ ಮತ್ತೊಂದು ಟ್ವೀಟ್‌ನಲ್ಲಿ ಅವರು 'ಅಮರ್ ಪ್ರೇಮ್' ಚಿತ್ರದ ಪ್ರಸಿದ್ಧ ಹಾಡಿನ ಕೆಲವು ಸಾಲುಗಳನ್ನು ಬರೆದಿದ್ದಾರೆ.
कुछ तो लोग कहेंगे, लोगों का काम है कहना
— Shashi Tharoor (@ShashiTharoor) April 7, 2022
छोड़ो बेकार की बातों में कहीं बीत ना जाए रैना
कुछ तो लोग कहेंगे, लोगों का काम है कहना!
कुछ रीत जगत की ऐसी है, हर एक सुबह की शाम हुई
तू कौन है, तेरा नाम है क्या, सीता भी यहाँ बदनाम हुई
कुछ तो लोग कहेंगे, लोगों का काम है कहना! @supriya_sule https://t.co/X69vWB7j3u