ಮಧ್ಯಪ್ರದೇಶ: ಮಗು ತನ್ನದಲ್ಲ ಎಂದು ಪತಿ ಹೇಳಿದ್ದಕ್ಕೆ ಹೆತ್ತ ಕುಡಿಯನ್ನೇ ಕೊಂದಳು ತಾಯಿ!
ಮಗು ತನ್ನದಲ್ಲ ಎಂದು ಪತಿ ಹೇಳಿದ್ದಕ್ಕೆ 18 ತಿಂಗಳ ಕೂಸನ್ನು ತಾಯಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಅನ್ನುಪುರ್ ಜಿಲ್ಲೆಯಲ್ಲಿ ನಡೆದಿದೆ.
Published: 07th April 2022 10:03 PM | Last Updated: 07th April 2022 10:03 PM | A+A A-

ಅಪರಾಧ
ಭೋಪಾಲ್: ಮಗು ತನ್ನದಲ್ಲ ಎಂದು ಪತಿ ಹೇಳಿದ್ದಕ್ಕೆ 18 ತಿಂಗಳ ಕೂಸನ್ನು ತಾಯಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಅನ್ನುಪುರ್ ಜಿಲ್ಲೆಯಲ್ಲಿ ನಡೆದಿದೆ.
26 ವರ್ಷದ ಮಹಿಳೆ ಏಕಾ ಏಕಿ ತನ್ನ ಕೊಠಡಿಯಿಂದ ಹೊರಬಂದು ತನ್ನ ಮಗು ಸ್ಪಂದಿಸುತ್ತಿಲ್ಲ ಎಂದು ಹೇಳಿದರು. ಕುಟುಂಬ ಸದಸ್ಯರು ಮಗುವಿನ ಮೂಗಿನಿಂದ ರಕ್ತಸ್ರಾವ ಆಗಿರುವುದನ್ನು ಕಂಡರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಗುವಿನ ತಂದೆ, ಆ ಮಗು ತನ್ನದಲ್ಲ ಎಂದು ಹೇಳಿದ್ದ, ಅಷ್ಟೇ ಅಲ್ಲದೇ ಪತ್ನಿಯ ನಡತೆಯನ್ನು ಶಂಕಿಸಿ ಮಗುವಿನ ಡಿಎನ್ಎ ಪರೀಕ್ಷೆ ಮಾಡಿಸಬೇಕೆಂದೂ ಒತ್ತಾಯಿಸಿದ್ದ.
ತನ್ನ ಪತ್ನಿ ವಿರುದ್ಧ ಆರೋಪ ಮಾಡಿರುವ ವ್ಯಕ್ತಿ ಆಕೆ ತವರು ಮನೆಗೆ ಹೋಗಿದ್ದಳು, ಅದಾದ ನಾಲ್ಕು ತಿಂಗಳ ಬಳಿಕ ಆಕೆ ಗರ್ಭಿಣಿಯಾದಳು ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾನೆ.
ತನಿಖೆ, ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ತಾಯಿಯೇ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂಬುದು ದೃಢಪಟ್ಟಿದೆ. ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.