
ಪಿನಾಕಾ ಕ್ಷಿಪಣಿ ವ್ಯವಸ್ಥೆ
ನವದೆಹಲಿ: ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (DRDO) ನಿರ್ಮಿತ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಡಿಆರ್ಡಿಒ ಮತ್ತು ಭಾರತೀಯ ಸೇನೆಯು ಪೋಖ್ರಾನ್ ಫೈರಿಂಗ್ ರೇಂಜ್ಗಳಲ್ಲಿ ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ಕಳೆದ ಹದಿನೈದು ದಿನಗಳ ಅವಧಿಯಲ್ಲಿ 24 ಪಿನಾಕಾ Mk-I (ವರ್ಧಿತ) (Enhanced) ರಾಕೆಟ್ ಸಿಸ್ಟಮ್ಗಳನ್ನು (EPRS) ವಿವಿಧ ಶ್ರೇಣಿಗಳಿಗೆ ಹಾರಿಸಲಾಗಿದ್ದು, ಶಸ್ತ್ರಾಸ್ತ್ರಗಳು ಅಗತ್ಯವಾದ ನಿಖರತೆ ಮತ್ತು ಸ್ಥಿರತೆಯನ್ನು ಪೂರೈಸಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
EPRS ಕಳೆದ ದಶಕದಿಂದ ಭಾರತೀಯ ಸೇನೆಯೊಂದಿಗೆ ಸೇವೆಯಲ್ಲಿರುವ ಪಿನಾಕಾ ರೂಪಾಂತರದ ನವೀಕರಿಸಿದ ಆವೃತ್ತಿಯಾಗಿದ್ದು, ಉದಯೋನ್ಮುಖ ಅವಶ್ಯಕತೆಗಳನ್ನು ಪೂರೈಸಲು ಶ್ರೇಣಿಯನ್ನು ಹೆಚ್ಚಿಸುವ ಸುಧಾರಿತ ತಂತ್ರಜ್ಞಾನಗಳೊಂದಿಗೆ ರಾಕೆಟ್ ವ್ಯವಸ್ಥೆಯನ್ನು ನವೀಕರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
"ಈ ಪ್ರಯೋಗಗಳೊಂದಿಗೆ, ಉದ್ಯಮದಿಂದ EPRS ನ ತಂತ್ರಜ್ಞಾನ ಹೀರಿಕೊಳ್ಳುವಿಕೆಯ ಆರಂಭಿಕ ಹಂತವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉದ್ಯಮದ ಪಾಲುದಾರರು ರಾಕೆಟ್ ವ್ಯವಸ್ಥೆಯ ಬಳಕೆದಾರ ಪ್ರಯೋಗಗಳು/ಸರಣಿ ಉತ್ಪಾದನೆಗೆ ಸಿದ್ಧರಾಗಿದ್ದಾರೆ. ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಪುಣೆಯ ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಅಭಿವೃದ್ಧಿಪಡಿಸಿದೆ. ಇದನ್ನು ಡಿಆರ್ಡಿಒದ ಮತ್ತೊಂದು ಪುಣೆ ಮೂಲದ ಪ್ರಯೋಗಾಲಯವಾದ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ ಬೆಂಬಲಿಸುತ್ತದೆ. ಪಿನಾಕಾದ ವರ್ಧಿತ ಶ್ರೇಣಿಯ ಆವೃತ್ತಿಯ ಕಾರ್ಯಕ್ಷಮತೆಯ ಪರಿಣಾಮಕಾರಿತ್ವವನ್ನು ಸ್ಥಾಪಿಸಿದ ನಂತರ, ತಂತ್ರಜ್ಞಾನವನ್ನು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಎಕನಾಮಿಕ್ ಎಕ್ಸ್ಪ್ಲೋಸಿವ್ಸ್ ಲಿಮಿಟೆಡ್, ನಾಗ್ಪುರಕ್ಕೆ ವರ್ಗಾಯಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ.
"DRDOನಿಂದ ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ MIL ತಯಾರಿಸಿದ ರಾಕೆಟ್ಗಳನ್ನು ಈ ಅಭಿಯಾನದ ಸಮಯದಲ್ಲಿ ಹಾರಾಟ ಪರೀಕ್ಷೆಗೆ ಒಳಪಡಿಸಲಾಯಿತು. ಪಿನಾಕಾ ರಾಕೆಟ್ ವ್ಯವಸ್ಥೆಯಲ್ಲಿ ಬಳಸಬಹುದಾದ ವಿವಿಧ ರೀತಿಯ ಯುದ್ಧಸಾಮಗ್ರಿ ಮತ್ತು ಫ್ಯೂಸ್ಗಳನ್ನು ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಡಿಆರ್ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಅವರು ರಾಕೆಟ್ಗಳ ಹಾರಾಟದ ಪ್ರಯೋಗಗಳನ್ನು ಪೂರ್ಣಗೊಳಿಸಿದ ಯೋಜನೆಯಲ್ಲಿ ತೊಡಗಿರುವ ತಂಡದ ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ.